Monday, June 22, 2026
Google search engine
Homeಕಾರ್ಕಳಜೋಡುರಸ್ತೆ: ದೇವಿ ನಗರದ ಭಗವತಿ ಭಜನಾ ಮಂಡಳಿಯ ವತಿಯಿಂದ ಪ್ರತಿಭಾ ಪುರಸ್ಕಾರ

ಜೋಡುರಸ್ತೆ: ದೇವಿ ನಗರದ ಭಗವತಿ ಭಜನಾ ಮಂಡಳಿಯ ವತಿಯಿಂದ ಪ್ರತಿಭಾ ಪುರಸ್ಕಾರ

ದೇವಿ ನಗರದ ಭಗವತಿ ಭಜನಾ ಮಂಡಳಿಯ ವತಿಯಿಂದ ದಿನಾಂಕ 20.06.2026 ರಂದು, ಈ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಹತ್ತನೇ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು, ಇಲ್ಲಿಯ ಉಪನ್ಯಾಸಕರಾಗಿರುವ ಗೋಪಾಲಕೃಷ್ಣ ಗೋರೆಯವರು ವಿದ್ಯಾರ್ಥಿಗಳಿಗೆ ಆದರ್ಶ ಮೌಲ್ಯ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಡಳಿಯ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಶುಭಾ ಬಾಬಣ್ಣ ವಾಗ್ಳೆ ಈ ಕಾರ್ಯಕ್ರಮ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳ ಹೆತ್ತವರು ಹಾಗೂ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಪಾಲುಗೊಂಡ ಕಾರ್ಯಕ್ರಮದಲ್ಲಿ ಕಲ್ಪನಾ ಜಿ. ಮೊಳಕೋಡ ಸ್ವಾಗತಿಸಿದರೆ, ಜ್ಯೋತಿ ಸುರೇಂದ್ರ ನಾಯಕ್ ಹಾಗೂ ಸಾವಿತ್ರಿ ವೇಣುಗೋಪಾಲ ಭಟ್ ಪ್ರಾರ್ಥನೆ ಗೈದರು. ಜಯಶ್ರೀ ಪ್ರಮೋದ್ ನಾಯ್ಕ್ ನಿರೂಪಿಸಿ ರೇಣುಕಾ ಅಶೋಕ್ ಕುಮಾರ್ ರವರು ಧನ್ಯವಾದ ಸಮರ್ಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments