Monday, June 22, 2026
Google search engine
Homeಕಾರ್ಕಳಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

ಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

ನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸದಾ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ಜ್ಞಾನಸುಧಾದ ಪೂರ್ವ ವಿದ್ಯಾರ್ಥಿನಿ, ಮಾಹೆಯ ಯೋಗಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಆತ್ಮಿಕ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಯೋಗದ ಮಹತ್ವವನ್ನು ಪ್ರಾತ್ಯಾಕ್ಷಿಕೆಯ ಮೂಲಕ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಉಪ್ರಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು ಮತ್ತು ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ಉಪಸ್ಥಿತಿರಿದ್ದರು. ಆಗ್ಲಭಾಷಾ ಉಪನ್ಯಾಸಕಿ ಕು.ದಿವ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments