ಕಾಬೆಟ್ಟು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಅನಧಿಕೃತ ಆಯ್ಕೆಯ ಕುರಿತು ಇಂದು ವಿವಿಧ ದಲಿತ ಸಂಘಟನೆಗಳ ನಾಯಕರುಗಳಿಂದ ತಹಶೀಲ್ದಾರರಿಗೆ ಮನವಿ ನೀಡಲಾಯಿತು.ಮನವಿಯಲ್ಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ಪುನರ್ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘ(ರಿ.)ದ ಗೋವರ್ಧನ್ ರಾಣೆ, ಕರ್ನಾಟಕ ಭೀಮ್ ಸೇನೆ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾದ ಸುಧಾಕರ್ ದಾನಶಾಲೆ,ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ(ರಿ.)ಯ ತಾಲೂಕು ಅಧ್ಯಕ್ಷರಾದ ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, ಸುನೀತಾ ಅಂಡಾರು, ಶ್ರೀನಿವಾಸ್ ಕಾರ್ಲ ಉಪಸ್ಥಿತರಿದ್ದರು.



















