ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕಿಯರಿಗೆ ‘ಬ್ಲೂಂ & ಬಿ ವೆಲ್’ಎಂಬ ವಿಷಯದಲ್ಲಿ ಡಾ. ರಾಜಲಕ್ಷ್ಮಿ ಸಂತೆಕಟ್ಟೆ ಉಡುಪಿ ತರಬೇತಿಯನ್ನು ನಡೆಸಿಕೊಟ್ಟರು.
ಡಾ. ರಾಜಲಕ್ಷ್ಮಿ ನಮ್ಮ ಕುಳಿತುಕೊಳ್ಳುವ ಭಂಗಿ ಮತ್ತು ಪ್ರಭುದ್ಧವಾಗಿ ಯೋಚಿಸುವ ಕಲೆ ಬದುಕಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದರು. ಡಾ. ಭಾರ್ಗವಿ ಆರ್ ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಿತಾ ಪ್ರಾರ್ಥಿಸಿ, ಮಾನ್ಯ ಸ್ವಾಗತಿಸಿ, ವೈಷ್ಣವಿ ನಿರೂಪಿಸಿ ವಂದಿಸಿದರು.

















