ನೂರಾಳಬೆಟ್ಟು ಶ್ರೀ ಮಾತಾಕಲಾದೇವಿಯ ಅನುಗ್ರಹದಿಂದ ಯಕ್ಷತೀರ್ಥ ಕಲಾಸೇವೆ ತಂಡದ 7ನೇ ವರ್ಷದ ಯಕ್ಷತೀರ್ಥ ಸಂಭ್ರಮದ ಅಂಗವಾಗಿ ಶ್ರೀದೇವಿ ಅಮ್ಮನವರಿಗೆ ಪತ್ರಿಕೆ ಸಮರ್ಪಣೆ ಮತ್ತು ಯಕ್ಷತೀರ್ಥ ಸಂಭ್ರಮದ
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು. 5 ರಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಲುವಾಗಿ ಪೊ। ಪವನ ಕಿರಣಕೆರೆ ವಿರಚಿತ ಮತ್ತು ವ್ಯಾಖ್ಯಾನದ ಅಗ್ನಿ ಪರೀಕ್ಷೆ ಸೀತಾ-ರಾಮ ಪುನಃರ್ಮಿಲನ ಯಕ್ಷ ಕಾವ್ಯಯಾನ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಕ್ಷಕಲಾವಿದರಿಗೆ ಪ್ರೋತ್ಸಾಹಿಸಬೇಕಾಗಿ ಯಕ್ಷತೀರ್ಥ ಕಲಾಸೇವೆ, ನೂರಾಳ್‌ಬೆಟ್ಟು ಹಾಗೂ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸದಾನಂದ ಎಸ್. ಆಚಾರ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















