Monday, June 29, 2026
Google search engine
Homeಕಾರ್ಕಳಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ : ಹೆಬ್ರಿ ಅಮೃತಭಾರತಿಯಲ್ಲಿ ಹಸಿರು ಕಾರ್ಯಕ್ರಮ

ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ : ಹೆಬ್ರಿ ಅಮೃತಭಾರತಿಯಲ್ಲಿ ಹಸಿರು ಕಾರ್ಯಕ್ರಮ

ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ ನಾಶನಲ್ ಉಡುಪಿ ಜಿಲ್ಲೆ 275 ಎಸ್ ಹಾಗೂ ಪಿಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ” ಹಸಿರು” ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಅಲಯನ್ಸ್ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯ ಉಪಕಾರ ಸದಾಕಾಲ ಪಡೆದಂತಹ ನಾವು ಗಿಡ ನೆಟ್ಟು ಕೃತಜ್ಞತೆಯನ್ನು ಸಲ್ಲಿಸೋಣ, ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹಚ್ಚ ಹಸಿರಿನ ನಡುವೆ ಇದ್ದು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿಯೂ ಪೋಷಕರ ಸಹಕಾರದೊಂದಿಗೆ ಮಕ್ಕಳು ಗಿಡಗಳನ್ನು ನೆಟ್ಟು ಹೆಬ್ರಿಯ ಗ್ರಾಮೀಣ ಪರಿಸರ ಇನ್ನಷ್ಟು ಹಸಿರಾಗಲಿ ಎಂದು ಹೇಳಿದರು.

ಅಮೃತ ಭಾರತಿ ಟ್ರಸ್ಟಿ ಎಚ್. ಯೋಗೀಶ್ ಭಟ್ ಮಾತನಾಡಿ ನಾವು ಸುಂದರ ಪರಿಸರದಲ್ಲಿ ಶಿಕ್ಷಣ ಪಡೆಯುತ್ತಿದ್ದೇವೆ. ಆಲಯನ್ಸ್ ಕ್ಲಬ್ ಮೂಲಕ ಪ್ರತಿ ಮನೆಗೂ ಗಿಡವನ್ನು ನೀಡಿ ಪರಿಸರ ಹಸಿರಾಗಿಸಲು ಮಾಡುವ ಪ್ರಯತ್ನ ಶ್ಲಾಘನೀಯವಾದುದು ಎಂದರು.

ಅಲಯನ್ಸ್ ಇಂಟರ್‌ ನಾಶನಲ್ ಡೈರೆಕ್ಟರ್ ಶ್ರೀಧರ ಶೇಣವ, ಇಂಟರ್‌ ನಾಶನಲ್ ಕಮಿಟಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲಾ ಪ್ರಥಮ ಉಪ ಗವರ್ನರ್ ಕೆ. ಸುಧಾಕರ ಹೆಗ್ಡೆ, ಚೀಫ್ ಕೋಆರ್ಡಿನೇಟರ್ ಭಾಸ್ಕರ ಶೆಟ್ಟಿ, ವಲಯಾಧ್ಯಕ್ಷ ಸುದರ್ಶನ ಶೆಟ್ಟಿ, ಅಮೃತ ಭಾರತಿ ಪಿಯು ಕಾಲೇಜಿನ ಅಧ್ಯಕ್ಷ ಎಚ್. ರಾಜೇಶ್ ನಾಯಕ್, ಕಾರ್ಯದರ್ಶಿ ಗುರುದಾಸ ಶೆಣೈ, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಎಚ್. ಶೈಲೇಶ್ ಕಿಣಿ, ಟ್ರಸ್ಟಿಗಳಾದ ಡಾ. ಭಾರ್ಗವಿ ಐತಾಳ್, ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಚಂದ್ರ ಎಂ, ಅಮೃತ ಭಾರತಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಹೆಚ್ ವೈ, ಅಪರ್ಣಾ ಆಚಾರ್ಯ , ಶಕುಂತಲಾ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಮೃತಾ ಭಾರತಿ ಪಿ ಆರ್ ಒ ವಿಜಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಲಯನ್ಸ್ ಕ್ಲಬ್ ಜಿಲ್ಲಾ ಪಿ ಆರ್ ಒ ಡಾ. ಜಗದೀಶ್ ಹೊಳ್ಳ ನಿರೂಪಿಸಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments