Sunday, June 28, 2026
Google search engine
Homeಕಾರ್ಕಳ ಡಾ. ಎಂ.ಎನ್.ರಾಜೇಂದ್ರ ಕುಮಾರ್ ನಾಗರಾಬಾವಿ ಕೆರೆ ಕಾಮಗಾರಿ ವೀಕ್ಷಣೆ

 ಡಾ. ಎಂ.ಎನ್.ರಾಜೇಂದ್ರ ಕುಮಾರ್ ನಾಗರಾಬಾವಿ ಕೆರೆ ಕಾಮಗಾರಿ ವೀಕ್ಷಣೆ

ಕಾರ್ಕಳದ ಐತಿಹಾಸಿಕ ನಾಗರಾಬಾವಿ ಕೆರೆ ಪುನರುಜ್ಜೀವನ ಯೋಜನೆಯ ದ್ವಿತೀಯ ಹಂತದ ಕಾಮಗಾರಿಗೆ ಸಾರ್ವಜನಿಕರು ಹಾಗೂ ಸಂಸ್ಥೆಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನು ಎಸ್‌.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ವೀಕ್ಷಿಸಿದರು.

ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ₹5,00,000 ದೇಣಿಗೆ ನೀಡಿದರು. ದೇಣಿಗೆಯನ್ನು ನೀಡಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರಿಗೆ ನಾಗರಾಭಾವಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ರೋಟರಿ ಕ್ಲಬ್ ಕಾರ್ಕಳದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.

ಪ್ರಸ್ತುತ ಕೆರೆಯ ಪುನರುಜ್ಜೀವನ ಯೋಜನೆಯ ದ್ವಿತೀಯ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಮಾಜದ ವಿವಿಧ ವರ್ಗಗಳಿಂದ ದೊರೆಯುತ್ತಿರುವ ಸಹಕಾರ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಪಾರ ಪ್ರೇರಣೆ ನೀಡುತ್ತಿದೆ. ಈ ಐತಿಹಾಸಿಕ ಸೇವಾ ಕಾರ್ಯಕ್ಕೆ ಇನ್ನೂ ಹೆಚ್ಚಿನ ದಾನಿಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವಂತೆ – ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ವಿನಂತಿಸಿರುತ್ತಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments