ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಈ ವರ್ಷ ಮಳೆಯ ಭಾರಿ ಅಭಾವದಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು ಉತ್ತಮ ಮಳೆ ಬೆಳೆಗಾಗಿ ಮಂಗಳವಾರ ಗ್ರಾಮಸ್ಥರು ಸೇರಿಕೊಂಡು ಶ್ರೀ ಅನಂತ ಪದ್ಮನಾಭ ದೇವರಿಗೆ ಸೀಯಾಳ ಅಭಿಷೇಕ ಮಾಡಿ ಉತ್ತಮ ಮಳೆ ಬೆಳೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಿದರು. ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರ ಹೆಬ್ರಿ ತಾರನಾಥ ಬಲ್ಲಾಳ್, ಅರ್ಚಕ ವೃಂದ, ಭಕ್ತ ಸಮೂಹ ಭಾಗಿಯಾದರು.
















