ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ. ಎ, ಸಿ.ಎಸ್ ಒರಿಯಂಟೇಶನ್ ಕಾರ್ಯಕ್ರಮವನ್ನು ಸಿ.ಎ. ದಾಮನಿ ನಡೆಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿ ಸಿ.ಎ. ದಾಮನಿ ಮಾತನಾಡಿ, ಪಿಯುಸಿ ಹಂತದಲ್ಲಿಯೇ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಆಳವಾದ ಅಧ್ಯಯನ ನಡೆಸಬೇಕು. ಶ್ರೇಷ್ಠ ಸಾಧನೆಗೆ ಶಿಸ್ತು ಮತ್ತು ಸಂಯಮ ಅತೀ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕೌಶಲ್ಯ ಅವಶ್ಯಕವಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ತರವಾದದ್ದು ಎಂದರು. ಯೋಗ ಗುರು ಪ್ರಕಾಶ್ ಚಂದ್ರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಶುಂಪಾಲ ಪ್ರಕಾಶ್ ಜೋಗಿ ಸಂಪನ್ಮೂಲ ವ್ಯಕ್ತಿ ದಾಮನಿ ಅವರನ್ನು ಗೌರವಿಸಿದರು.

















