ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ರಾಷ್ಟ್ರಮಟ್ಟದಲ್ಲಿ ನಡೆಸುವ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಜ್ಞಾನಸುಧಾದ ವಾಣಿಜ್ಯ ವಿಭಾಗದ 12 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ಶ್ರೀಕರ್ 400ರಲ್ಲಿ 316 ಅಂಕ ತೆಗೆಯುವ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ
ಶ್ರೀಕರ ಎಸ್ ಉಪಾಧ್ಯಾಯ (316 ಅಂಕ),
ಸಕ್ಷಮ್ ಕದಂಬ (272ಅಂಕ),
ಚಾನ್ವಿ (261 ಅಂಕ),
ಲತೇಶ್ ಕೆ ಮೊಯ್ಲಿ (241 ಅಂಕ)
,
ಶ್ರೇಯಸ್ ಶೆಣೈ (239 ಅಂಕ)
,
ಮನ್ವಿಶ್ ರಾವ್ (228 ಅಂಕ)
,
ಸಾನ್ವಿ ದಿನೇಶ್ ಶೆಟ್ಟಿ (225 ಅಂಕ)
,
ರಕ್ಷಿತ್ ಶೆಟ್ಟಿ (223 ಅಂಕ)
ವೈಶಾಲಿ (217 ಅಂಕ)
,
ಆದಿತ್ಯ ಶೆಟ್ಟಿಗಾರ್ (214 ಅಂಕ)
,
ಪ್ರತೀಕ್ಷಾ ವಸಂತ್ (200 ಅಂಕ)
ಮತ್ತು
ಸನ್ನಿಧಿ (200 ಅಂಕ)
ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.



















