ಬೊಳ್ಳಿ ಕಲಾವಿದರ ಬಜಗೋಳಿ ಅರ್ಪಿಸುವ ಅಭಿಷೇಕ್ ಬಜಗೋಳಿ ರಚನೆ ನಿರ್ದೇಶನ ಸಾಹಿತ್ಯದ ಈ ವರ್ಷದ ತುಳು ಸಂಸಾರಿಕ ನಾಟಕ ‘ರಾತ್ರೆ ಪಗೆಲ್ ನಾಟಕಯೇ..’ ನಾಟಕದ ಶುಭಮೂಹೂರ್ತ ಮುಡ್ರಾಲು ದುರ್ಗಾಪರಮೇಶ್ವರಿ ಪುಣ್ಯ ಕ್ಷೇತ್ರದಲ್ಲಿ ಗುರುವಾರ ನಡೆಯಿತು. ಕ್ಷೇತ್ರದ ಅರ್ಚಕ ಹರಿಚಂದ್ರ ಭಟ್ ಮುಡ್ರಾಲು, ಮುಡಾರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ರಜತ್ ರಾಮ್ ಮೋಹನ್, ಪ್ರಶಾಂತ್ ಕರ್ಮಾರ್ ಕಟ್ಟೆ, ದಿಲೀಪ್ ಡಿಕೆ, ಸೃಷ್ಟಿ ಕಲಾವಿದರು ಬಜಗೋಳಿ ತಂಡ ಹಾಗೂ ಹಲವು ಹಿರಿಯ ಕಲಾವಿದರು ಉಪಸ್ಥಿತರಿದ್ದರು.



















