ಶಿವಪುರ : ಶಿವಪುರ ಗ್ರಾಮದ ನಾಯರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀನಿಧಿ ಫೌಂಡೇಶನ್ ಮತ್ತು ರಿಸರ್ಚ್ ಸೆಂಟರ್ ವತಿಯಿಂದ ದಿನೇಶ ಶೆಟ್ಟಿ ಖಜಾನೆ ಅವರು ಕೊಡಮಾಡಿದ ಶಾಲಾ ಮಕ್ಕಳಿಗೆವರ್ಷಕ್ಕೆ ಬೇಕಾಗುವಷ್ಟು ನೋಟ್ ಹಾಗೂ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಆಚಾರ್ಯ, ವಿಶ್ವನಾಥ್ ನಾಯ್ಕ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ವಿಮಲ ಸ್ವಾಗತಿಸಿ, ಪ್ರೀತಿ ಎಂ ನಿರೂಪಿಸಿ ಸುಶ್ಮಿತಾ ವಂದಿಸಿದರು.



















