Friday, July 17, 2026
Google search engine
Homeಕಾರ್ಕಳಕಾರ್ಕಳ: ಕೋಳಿ ಅಂಕಕ್ಕೆ ಪೋಲೀಸರ ದಾಳಿ

ಕಾರ್ಕಳ: ಕೋಳಿ ಅಂಕಕ್ಕೆ ಪೋಲೀಸರ ದಾಳಿ

ಕೋಳಿ ಅಂಕಕ್ಕೆ ಪೋಲೀಸರ ದಾಳಿ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಕುಬೇರ ಕೋಳಿ ಫಾರ್ಮ್‌ ಬಳಿ ನಡೆದಿದೆ.

ರಕ್ಷಿತ್‌ ಶೆಟ್ಟಿ, ಪ್ರವೀಣ ದೇವಾಡಿಗ ಹಾಗೂ ಇತರರು ತಮ್ಮ ಸ್ವಂತ ಲಾಭಕ್ಕೊಸ್ಕರ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದು, ಈ ವಿಷಯ ತಿಳಿದ ಪೊಲೀಸ್‌ ಉಪನಿರೀಕ್ಷಕರಾದ ಶಿವಕುಮಾರ್‌ ಕೋಳಿ ಅಂಕಕ್ಕೆ ದಾಳಿ ಮಾಡಿ,ಜೂಜಾಟಕ್ಕೆ ಉಪಯೋಗಿಸಿದ 12,000/- ರೂಪಾಯಿ ಬೆಲೆಯ ಜೀವಂತ ಕೋಳಿಗಳು -5, ಕೋಳಿಗಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, ನಗದು ಹಣ 4,370/- ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments