Friday, July 17, 2026
Google search engine
Homeಕಾರ್ಕಳಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೊಸಿಯೇಶನ್ (ರಿ.) ಮತ್ತು ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ (ರಿ.)...

ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೊಸಿಯೇಶನ್ (ರಿ.) ಮತ್ತು ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ (ರಿ.) ಕಾರ್ಕಳ ಅಧ್ಯಕ್ಷರಾಗಿ ಕೆ.ಸುಧಾಕರ ಆಚಾರ್ಯ ಸಾಲ್ಮರ ಹಾಗೂ ಕಾರ್ಯದರ್ಶಿಯಾಗಿ ಕೆ.ಸುರೇಶ್ ಆಚಾರ್ಯ ನಿಟ್ಟೆ

ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೊಸಿಯೇಶನ್ (ರಿ.) ಮತ್ತು ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ (ರಿ.) ಕಾರ್ಕಳ

ಅಧ್ಯಕ್ಷರಾಗಿ ಕೆ.ಸುಧಾಕರ ಆಚಾರ್ಯ ಸಾಲ್ಮರ ಹಾಗೂ ಕಾರ್ಯದರ್ಶಿಯಾಗಿ ಕೆ.ಸುರೇಶ್ ಆಚಾರ್ಯ ನಿಟ್ಟೆ

S.K.V. ಅಸೋಸಿಯೇಷನ್ ಮತ್ತು ಫೈನಾನ್ಸಿನ 2025-26 ರಸಾಲಿನ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ನೀಡುವಿಕೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮುಕ್ತೇಸರ್ ಶಿಲ್ಪಿ ರಾಮಚಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಅಭ್ಯಾಗತರಾಗಿ ಶ್ರೀ ಪ್ರಕಾಶ್ ಆಚಾರ್ ನ್ಯಾಯವಾದಿಗಳು, ಅಧ್ಯಕ್ಷರು ವಕೀಲರ ಸಂಘ, ಕಾರ್ಕಳ
ಇವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ಜೊತೆ ಮುಕ್ತೇಸರರಾದ ಪಿ.ರವಿ ಆಚಾರ್ಯ,
ಕೆ.ಸುರೇಶ್ ಆಚಾರ್ಯನಿಟ್ಟೆ, ಪಿ.ವಸಂತ ಆಚಾರ್ಯ, ಗೌರವ ಅಧ್ಯಕ್ಷರಾದ ಕೆ.ದಿನೇಶ್ ಆಚಾರ್ಯ
ಸಂಸ್ಥೆಯ ಅಧ್ಯಕ್ಷರಾದ ಕೆ.ಸುಧಾಕರ ಆಚಾರ್ಯ, ಭಜನಾ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ದಿನೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಸುಧಾಕರ ಆಚಾರ್ಯ, ಕಾರ್ಯದರ್ಶಿಯಾಗಿ ಕೆ.ಸುರೇಶ್ ಆಚಾರ್ಯ ನಿಟ್ಟೆ, ಕೋಶಾಧ್ಯಕ್ಷರಾಗಿಪಿ.ವಸಂತ ಆಚಾರ್ಯ,ಗೌರವ ಅಧ್ಯಕ್ಷರಾಗಿ ಕೆ.ದಿನೇಶ ಆಚಾರ್ಯ ಉಪಾಧ್ಯಕ್ಷರಾಗಿ ಕೆ. ದಿವಾಕರ ಆಚಾರ್ಯ ನಿಟ್ಟೆ, ಗೌರವ ಕಾರ್ಯದರ್ಶಿಯಾಗಿ ಪಿ.ರವಿ ಆಚಾರ್ಯ ಪೆರ್ವಾಜೆ ಆಯ್ಕೆಯಾದರು.

ಅಸೋಸಿಯೇಷನ್ ವತಿಯಿಂದ ಶ್ರೀ ಕಾಳಿಕಾಂಬ ಭಜನಾ ಸೇವಾ ಸಮಿತಿಗೆ ರೂಪಾಯಿ 15,000/- ಸಹಾಯ ಧನ ನೀಡಲಾಯಿತು. 10 ನೇ ತರಗತಿಯಲ್ಲಿ ಕಲಿಯುತ್ತಿರುವ 13 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಹತ್ತನೇ ಮತ್ತು ಸೆಕೆಂಡ್ ಪಿ.ಯು.ಸಿ.ಯಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದು ಪಾಸಾದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ನಗದು ನೀಡಿ ಗೌರವಿಸಲಾಯ್ತು.ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಕೆ. ರತ್ನಾಕರ ಆಚಾರ್ಯ ಕಟ್ಟಿಮಾರ್, ಎಂ. ರಮೇಶ್ ಆಚಾರ್ಯ ಪರಪು, ಪ್ರಶಾಂತ್ ಆಚಾರ್ಯ, ಸತೀಶ್  ಆಚಾರ್ಯ,ಅಶೋಕ್ ಆಚಾರ್ಯ ಅಂಡಾರ್,ಎಸ್. ಪ್ರವೀಣ್ ಆಚಾರ್ಯ,ವೈ. ಟಿ. ಪ್ರಕಾಶ್ ಆಚಾರ್ಯ,
ಕೆ. ಕರುಣಾಕರ ಆಚಾರ್ಯ ಆಯ್ಕೆಯಾಗಿರುತ್ತಾರೆ.

ಅಸೋಸಿಯೇಷನ್ ಅಧಕ್ಷರಾದ ಕೆ. ಸುಧಾಕರ ಆಚಾರ್ಯರು ಸ್ವಾಗತಿಸಿ, ರಮೇಶ್ ಆಚಾರ್ಯ ಬಂಗ್ಲಗುಡ್ಡೆ ವಂದಿಸಿದರು.ಎಂ. ರಮೇಶ್ ಆಚಾರ್ಯ ಪರಪು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments