Tuesday, July 21, 2026
Google search engine
Homeಕರಾವಳಿಮಾದಕ ವಸ್ತು ಸಾಗಾಟ:ಕಾರ್ಕಳ ಮೂಲದ ಇಬ್ಬರು ಸೇರಿ ಮೂವರ ಬಂಧನ

ಮಾದಕ ವಸ್ತು ಸಾಗಾಟ:ಕಾರ್ಕಳ ಮೂಲದ ಇಬ್ಬರು ಸೇರಿ ಮೂವರ ಬಂಧನ

ಉಡುಪಿ: ಇಲ್ಲಿನ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ಎಂ.ಡಿ.ಎಂ.ಎ ಪೌಡರ್, ಎಂ.ಡಿ.ಎಂ.ಎ ಟ್ಯಾಬ್ಲೆಟ್ ಹಾಗೂ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಾವರ ಪಿತ್ರೋಡಿಯ ವಿಜಯ ಪೂಜಾರಿ (36), ಕಾರ್ಕಳದ ಕುಕ್ಕಂದೂಹು ಹಾರ್ಜಿಡ್ಡು ನಿವಾಸಿ ಪಿ.ಎ.ಮುಹಮ್ಮದ್ ಶಮ್ಮಾಸ್(24) ಹಾಗೂ ಕಾರ್ಕಳ ತಾಲೂಕು ಕುಂಟಿಬೈಲು ಮಿಯಾರು ಗ್ರಾಮದ ಆಕಾಶ್ ಶೆಟ್ಟಿ (20) ಬಂಧಿತ ಆರೋಪಿಗಳು. ಆರೋಪಿಗಳಿಂದ 4 ಗ್ರಾಂ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋ ಗಾಂಜಾ, 3.65 ಗ್ರಾಂ, ಎಂ.ಡಿ.ಎಂ.ಎ ಟ್ಯಾಬ್ಲೆಟ್‌ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಿದ ಕಾರು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments