Saturday, July 18, 2026
Google search engine
Homeಕಾರ್ಕಳಬದರೀನಾಥ ದೇಣಿಗೆ ಕಳ್ಳತನ: ದೇಗುಲದ ಮಾಜಿ ಅಧಿಕಾರಿ ಸೆರೆ

ಬದರೀನಾಥ ದೇಣಿಗೆ ಕಳ್ಳತನ: ದೇಗುಲದ ಮಾಜಿ ಅಧಿಕಾರಿ ಸೆರೆ

ಅಯೋಧ್ಯೆ ರಾಮಮಂದಿರದಲ್ಲಿ ನಡೆ ದಂತೆ ಬದರೀನಾಥ ದೇಗುಲದಲ್ಲೂ ದೇಣಿಗೆ ಕಳವು ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಅದನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದೇಗುಲದ ಮಾಜಿ ಅಧಿಕಾರಿ ರಾಜೇಂದ್ರ ಚೌಹಾಣ್ ಅವರನ್ನು ಶುಕ್ರವಾರ ಬಂಧಿಸಿದೆ.

ಶಂಕಿತರಲ್ಲಿ ಚೌಹಾಣ್ ಕೂಡ ಒಬ್ಬರಾ ಗಿದ್ದು, ತನಿಖೆಯ ವೇಳೆ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರನ್ನು 4 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಜೂ.22, 25 ಹಾಗೂ 29 ರಂದು ಚೌಹಾಣ್ ನಗದು ಕಂತೆಗಳನ್ನು ಸಂಗ್ರಹಿಸಿ ತನ್ನ ಜೇಬಿನಲ್ಲಿ ಹಾಕಿಕೊಳ್ಳುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments