Saturday, July 18, 2026
Google search engine
Homeಕಾರ್ಕಳನೀಟ್ 2026 - ಫಲಿತಾಂಶ; ಜ್ಞಾನಸುಧಾ : ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ನೀಟ್ 2026 – ಫಲಿತಾಂಶ; ಜ್ಞಾನಸುಧಾ : ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಟಾಪರ್ ಆದ ಮೇಧಾಂಶ್ ಎನ್.ಬಿಗೆ ಟ್ರಸ್ಟಿನಿಂದ
ರೂ.2.5 ಲಕ್ಷ ಘೋಷಣೆ

ರಾಷ್ಟ್ರ ಮಟ್ಟದ ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎನ್.ಟಿ.ಎ. ನಡೆಸಿದ ನೀಟ್ 2026ರ ಫಲಿತಾಂಶದಲ್ಲಿ 720ಕ್ಕೆ 680 ಅಂಕ ಪಡೆದು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ, ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 267ನೇ ರ‍್ಯಾಂಕ್(ಕೆಟಗರಿಯಲ್ಲಿ 178ನೇ ರ‍್ಯಾಂಕ್) ಗಳಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮೇಧಾಂಶ್ ಎನ್. ಬಿ ಇವರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹಾಗೂ ಸಮಸ್ತ ಜ್ಞಾನಸುಧಾ ಬಳಗ ಸನ್ಮಾನಿಸಿ ಸಂಭ್ರಮಿಸಿತು.

ಇವರಿಗೆ ಇದೇ ಸಂದರ್ಭದಲ್ಲಿ ಟ್ರಸ್ಟಿನಿಂದ ರೂ. 2.50 ಲಕ್ಷವನ್ನು ಅವರ ಸಾಧನೆಗೆ ಪ್ರೋತ್ಸಾಹ ಧನವನ್ನು ಘೋಷಿಸಿದರು. ಇವರ ಹೆತ್ತವರಾದ ನಿಟ್ಟೆ ಇಂಜಿನಯರಿಂಗ್ ಕಾಲೇಜಿನ ಡೀನ್ ಆಗಿರುವ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ನರಸಿಂಹ ಕೆ ಬೈಲ್‌ಕೇರಿ ಹಾಗೂ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪದ್ಮಾವತಿ ಕೆ. ಉಪಸ್ಥಿತರಿದ್ದರು.

ಇದೇ ಸಂದರ್ಭ 99.9720985 ಪರ್ಸಂಟೈಲ್ ಗಳಿಸಿ 720ರಲ್ಲಿ 670 ಅಂಕ ಪಡೆದು, ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 519ನೇ ರ‍್ಯಾಂಕನ್ನು (ಕೆಟಗರಿ ವಿಭಾಗದಲ್ಲಿ 327ನೇ ರ‍್ಯಾಂಕ್) ತನ್ನದಾಗಿಸಿಕೊಂಡ ಮನೋಜ್ ಎಂ ಹಾಗೂ 99.9629481 ಪರ್ಸಂಟೈಲ್‌ನೊಂದಿಗೆ ರಾಷ್ಟçಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 701ನೇ ರ‍್ಯಾಂಕನ್ನು (ಕೆಟಗರಿ ವಿಭಾಗದಲ್ಲಿ 425ನೇ ರ‍್ಯಾಂಕ್) ಪಡೆದ ಅನಿರುದ್ಧ್ ಆರ್ ಉಡುಪ ಇವರನ್ನು ಸನ್ಮಾನಿಸಲಾಯಿತು. ಇವರಿಬ್ಬರಿಗೂ ಇದೇ ಸಂದರ್ಭದಲ್ಲಿ ಟ್ರಸ್ಟಿನಿಂದ ತಲಾ ರೂ. 2. ಲಕ್ಷವನ್ನು ಅವರ ಸಾಧನೆಗೆ ಪ್ರೋತ್ಸಾಹ ಧನವನ್ನು ಘೋಷಿಸಿದರು.

ಈ ಬಾರಿಯ ರಾಷ್ಟçಮಟ್ಟದ ನಡೆಯುವ ನೀಟ್-2026ರ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಒಟ್ಟು 528 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 59 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕವನ್ನು ಹಾಗೂ 133 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಪಡೆದಿರುತ್ತಾರೆ. ಸಂಸ್ಥೆಯ 260 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿರುವುದನ್ನು ಸ್ಮರಿಸಿಕೊಳ್ಳ ಬಹುದು.

ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿ ಮೇಧಾನ್ಶ್ರವರ ಪೂರ್ವಶಾಲೆಯಾದ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಶ್ರೀಮತಿ ಅನಿತಾ ಪಿ ರಾಜ್‌ರವರು ಉಪಸ್ಥಿತರಿದ್ದು, ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳ ಹೆತ್ತವರು, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಶ್ರೀ ಅನಿಲ್ ಕುಮಾರ್ ಜೈನ್ ಹಾಗೂ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ವಿದ್ಯಾರ್ಥಿಗಳ ಆಪ್ತ ಸಮಾಲೋಚಕರು ಡಾ. ಪ್ರಸನ್ನ ಹೆಗ್ಡೆ ಸಹಿತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು, ಡೀನ್ಸ್ಗಳು, ವಿಭಾಗ ಮುಖ್ಯಸ್ಥರುಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದವರ್ಗ, ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments