ಕಾರ್ಕಳದ ಐತಿಹಾಸಿಕ ನಾಗರಬಾವಿ ಕೆರೆ ಪುನರುಜ್ಜೀವನ ಯೋಜನೆಯ ಒಟ್ಟು ಅಂದಾಜು ವೆಚ್ಚ ₹93 ಲಕ್ಷವಾಗಿದ್ದು, ಯೋಜನೆಯ ಎರಡನೇ ಹಂತದ ಕಾಮಗಾರಿ ಸುಮಾರು ₹30 ಲಕ್ಷ ವೆಚ್ಚದಲ್ಲಿ ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ನಾಗರಬಾವಿ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ಕಾರ್ಕಳದ 2025–26ನೇ ಸಾಲಿನ ಅಧ್ಯಕ್ಷರಾದ ರೋಟೇರಿಯನ್ ನವೀನ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಯೋಜನೆಯ ಪ್ರಥಮ ಹಂತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಸುಮಾರು ₹25 ಲಕ್ಷ ವೆಚ್ಚದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಎರಡನೇ ಹಂತದ ಕಾಮಗಾರಿಗೆ ರೋಟರಿ ಕ್ಲಬ್, ದಾನಿಗಳು ಹಾಗೂ ಸಮಾಜದ ವಿವಿಧ ವರ್ಗದ ನಾಗರಿಕರು ಉದಾರವಾಗಿ ಕೈಜೋಡಿಸಿದ್ದು, ಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಕೆರೆಯ ಒಡ್ಡು ನಿರ್ಮಾಣ ಸುರಕ್ಷಿತ ಹಂತ ತಲುಪಿರುವುದು ಅತ್ಯಂತ ಸಂತಸದ ವಿಷಯವಾಗಿದೆ.
ಯೋಜನೆಗಾಗಿ ಹಲವು ಸಿಎಸ್‌ಆರ್ ಸಂಸ್ಥೆಗಳ ನೆರವನ್ನು ಕೋರಲಾಗಿದ್ದರೂ, ಇದುವರೆಗೆ ನಿರೀಕ್ಷಿತ ನೆರವು ದೊರೆತಿಲ್ಲ. ಆದಾಗ್ಯೂ, ಸಾರ್ವಜನಿಕರ ಸಹಕಾರದಿಂದ ಕಾಮಗಾರಿ ನಿರಂತರವಾಗಿ ಮುಂದುವರಿಯುತ್ತಿದೆ.
ಯೋಜನೆಗೆ ಉದಾರವಾಗಿ ದೇಣಿಗೆ ನೀಡಿದ ಪ್ರಮುಖ ದಾನಿಗಳಾದ:
ಶ್ರೀ ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್ – ₹5,00,000
ಶ್ರೀ ಕಮಲಾಕ್ಷ ಕಾಮತ್ – ₹2,25,000
ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ – ₹2,00,000
ಅವರಿಗೆ ನಾಗರಬಾವಿ ಅಭಿವೃದ್ಧಿ ಸಮಿತಿ ಹಾಗೂ ರೋಟರಿ ಕ್ಲಬ್ ಕಾರ್ಕಳ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿವೆ.
ಯೋಜನೆಯ ಉಳಿದ ಹಂತಗಳನ್ನು ಪೂರ್ಣಗೊಳಿಸಲು ಪ್ರಕೃತಿ, ಜಲಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು, ದಾನಿಗಳು, ಉದ್ಯಮಿಗಳು ಹಾಗೂ ಸಂಸ್ಥೆಗಳು ಉದಾರವಾಗಿ ದೇಣಿಗೆ ನೀಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಯೋಜನೆಗೆ ಸರ್ಕಾರಿ ಅನುದಾನ ದೊರಕಿಸುವ ಕುರಿತು ಕಾರ್ಕಳ ಶಾಸಕ ಶ್ರೀ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಅಗತ್ಯ ಸಮನ್ವಯ ಸಾಧಿಸಿ ಅನುದಾನ ಒದಗಿಸಲು ಅವರು ಭರವಸೆ ನೀಡಿದ್ದಾರೆ.
ನಾಗರಬಾವಿ ಕೆರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಈ ಜನಾಂದೋಲನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
– ಅಧ್ಯಕ್ಷರು, ನಾಗರಬಾವಿ ಅಭಿವೃದ್ಧಿ ಸಮಿತಿ– ರೋಟೇರಿಯನ್ ನವೀನ್‌ಚಂದ್ರ ಶೆಟ್ಟಿಅಧ್ಯಕ್ಷರು (2025–26), ರೋಟರಿ ಕ್ಲಬ್ ಕಾರ್ಕಳ



















