Thursday, July 23, 2026
Google search engine
Homeಕಾರ್ಕಳನನ್ನನ್ನು ಬಲಿ ಕಾ ಬಕ್ರಾ ಮಾಡಿದರು: ಸೋನಮ್ ಉಪವಾಸದಲ್ಲಿದ್ದಾಗ ಅಭಿಜಿತ್ ಸಮೋಸಾ ತಿಂದಿಲ್ಲವೇ? ಸ್ವಪಕ್ಷದ ವಿರುದ್ಧ...

ನನ್ನನ್ನು ಬಲಿ ಕಾ ಬಕ್ರಾ ಮಾಡಿದರು: ಸೋನಮ್ ಉಪವಾಸದಲ್ಲಿದ್ದಾಗ ಅಭಿಜಿತ್ ಸಮೋಸಾ ತಿಂದಿಲ್ಲವೇ? ಸ್ವಪಕ್ಷದ ವಿರುದ್ಧ ದಹಿಯಾ ಅಸಮಾಧಾನ

ಸೋಮವಾರ (ಜು.20) ದೆಹಲಿಯಲ್ಲಿ ನೀಟ್​ ಪರೀಕ್ಷೆ ಅಕ್ರಮವನ್ನು ವಿರೋಧಿಸಿ, ಜಂತರ್​ ಮಂತರ್​ನಿಂದ ಸಂಸತ್​ ಭವದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್​ರಿಂದ ಲಾಠಿ ಚಾರ್ಜ್​​ ಹಾಗೂ ಅಶ್ರುವಾಯು ಪ್ರಯೋಗವನ್ನು ನಡೆಸಲಾಗಿತ್ತು.
ಆದರೆ ಈ ಹೋರಾಟವನ್ನು ಹಮ್ಮಿಕೊಂಡಿದ್ದ ಸಿಜೆಪಿ ಪಕ್ಷದ ವಕ್ತಾರ, ವಿಜೇತಾ ದಹಿಯಾ ಘಟನಾ ಸ್ಥಳದಿಂದ ದೂರವಿದ್ದು, ಹೋಟೆಲ್​ವೊಂದರಲ್ಲಿ ಬರ್ಗರ್​ ತಿನ್ನುತ್ತಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೆ, ಆತನನ್ನು ಸಿಜೆಪಿ ಪಕ್ಷದಿಂದ ಆಚೆ ಹಾಕಲಾಗಿತ್ತು. ಈಗ ಈ ವಿಚಾರವಾಗಿ ಮಾತನಾಡಿರುವ ದಹಿಯಾ  ಅಭಿಜಿತ್​ ದಿಪ್ಕೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ತಮ್ಮನ್ನು ಪಕ್ಷದಿಂದ ಆಚೆ ಹಾಕಿದ ಬಗ್ಗೆ ವಿಡಿಯೋ ಹಂಚಿಕೊಂಡಿರು ವಿಜೇತಾ ದಹಿಯಾ, ನಾನು ಆ ದಿನ ಹೋರಾಟದಲ್ಲಿ ಭಾಗವಹಿಸಿದ್ದೆ. ಕೆಲ ಸಮಯದ ನಂತರ ನನಗೆ ಹಸಿವಾಯಿತು ಹೀಗಾಗಿ ತಿಂಡಿ ತಿನ್ನಲು ಆಚೆ ಹೋಗಿದ್ದೆ. ಆದರೆ ನಾನು ಬರ್ಗರ್​ ತಿನ್ನುವುದನ್ನು ದೊಡ್ಡ ಸಂಗತಿ ಎಂಬಂತೆ ಬಿಂಬಿಸಿದ ಹಿನ್ನಲೆ ನನ್ನನ್ನು ಪಕ್ಷದಿಂದ ತೆಗೆದು ಹಾಕಲಾಗಿದೆ.
ಆದರೆ ಸೋನಮ್​ ವಾಂಗ್​​ಚುಕ್​ ಅವರು ಉಪವಾಸ ಕುಳಿತಾಗ ಅಭಿಜಿತ್​ ದಿಪ್ಕೆ ಅವರ ಎದುರೇ ಕಚೋರಿ, ಸಮೋಸ ತಿನ್ನುತ್ತಿದ್ದ, ಆಗ ಅವನ ಪರವಾಗಿ ನಾನು ನಿಂತಿದ್ದೆ, ಅವನ ಪರ ನಿಂತು ನಾನು ಮಾತನಾಡಿದ್ದೆ. ಆದರೆ ನನ್ನ ವಿಚಾರದಲ್ಲಿ ಯಾರು ನನ್ನ ಪರ ನಿಲ್ಲಲಿಲ್ಲ, ನನ್ನನ್ನು ಒಂದು ರೀತಿಯಲ್ಲಿ ಬಲಿಕುರಿಯಾಗಿ ಮಾಡಿದರು ಎಂದು ಬೇಸರ ಹೊರಹಾಕಿದ್ದಾರೆ.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments