Wednesday, August 26, 2026
Google search engine
Homeರಾಜ್ಯಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ-ಸಚಿವ ಡಾ. ಯತೀಂದ್ರ

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ-ಸಚಿವ ಡಾ. ಯತೀಂದ್ರ

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಜಾಗ ಗುರುತು ಮಾಡಿರುವ ಜಾಗದಲ್ಲಿ ಕಂಬಳ ನಡೆಯುತ್ತದೆ. ಸಿಎಂ ಕೂಡ ಕಂಬಳ ನಡೆಸಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದರು.

25 ವರ್ಷಗಳಿಂದ ದಸರಾದಲ್ಲಿ ಅಭಿಮನ್ಯು ಭಾಗಿಯಾಗಿತ್ತು. ಈ ಬಾರಿ ಅಭಿಮನ್ಯು ನಿವೃತ್ತಿಯಾಗಿದೆ. ಅಭಿಮನ್ಯು 6 ಬಾರಿ ಅಂಬಾರಿ ಹೊತ್ತಿತ್ತು. ಹೀಗಾಗಿ ಅಭಿಮನ್ಯುವಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ ಕೊಡಲಾಗಿದೆ. ನಿಶಾನೆ ಆನೆಯಾಗಿ ಅಭಿಮನ್ಯು ಕರೆತರುವ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಸಾಧ್ಯತೆಗಳನ್ನು ನೋಡಿಕೊಂಡು ಆ ಬಗ್ಗೆ ತೀರ್ಮಾನ ಮಾಡುತ್ತೇವೆ. ಈ ಬಾರಿ ಅಂಬಾರಿ ಹೊರುವ ಆನೆಯನ್ನು ಇನ್ನೂ ಆಯ್ಕೆ ಮಾಡಿಲ್ಲ. ತಾಲೀಮು ನಡೆಸಿದ ಬಳಿಕ ಅದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments