Thursday, November 26, 2026
Google search engine
Homeಕಾರ್ಕಳಪೋಷಕರ ನಿರ್ಲಕ್ಷಿಸುವ ಮಕ್ಕಳಿಗೆ 3 ವರ್ಷ ಜೈಲು: ಕೇರಳಂ ಸಿಎಂ ಸತೀಶನ್

ಪೋಷಕರ ನಿರ್ಲಕ್ಷಿಸುವ ಮಕ್ಕಳಿಗೆ 3 ವರ್ಷ ಜೈಲು: ಕೇರಳಂ ಸಿಎಂ ಸತೀಶನ್

ಹಿರಿಯ ನಾಗರಿಕರ ರಕ್ಷಣೆಗೆ ಕೇರಳಂ ಬದ್ಧವಾಗಿದ್ದು, ಪೋಷಕರನ್ನು ನೋಡಿಕೊಳ್ಳದ ಮಕ್ಕಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ ಎಂದು ಮುಖ್ಯಮಂತ್ರಿ ವಿ. ಡಿ. ಸತೀಶನ್‌ ಹೇಳಿದ್ದಾರೆ.

ಪಟ್ಟಣಪುರಂನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಹಿರಿಯ ನಾಗರಿಕರಿಗಾಗಿ ನಿರ್ಮಿಸಲಾ ಗಿರುವ ಅತ್ಯಾಧುನಿಕ ಆಶ್ರಯತಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಮಸೂದೆಯನ್ನು ಈಗಾಗಲೇ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿದೆ. ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಇದು ಕಾನೂನಾಗಿ ಜಾರಿಯಾಗಲಿದೆ. ಪೋಷಕರಿಂದ ಆಸ್ತಿಯನ್ನು ಪಡೆದುಕೊಂಡ ಬಳಿಕ ಅವರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಲಿದೆ. ಈ ಹೊಣೆಯಿಂದ ನುಣುಚಿಕೊಳ್ಳಲು ಅವಕಾಶ ನೀಡುವುದಿಲ್ಲ ಹಿರಿಯ ನಾಗರಿಕರ ರಕ್ಷಣೆಗೆ ಸರಕಾರ ನಿಲ್ಲಲಿದೆ ಎಂದಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments