Wednesday, November 25, 2026
Google search engine
Homeಕಾರ್ಕಳಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಸಂಭ್ರಮದ ದೀಪಾವಳಿ ಹಾಗೂ ತುಳಸಿ ಪೂಜೆ ಆಚರಣೆ.

ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಸಂಭ್ರಮದ ದೀಪಾವಳಿ ಹಾಗೂ ತುಳಸಿ ಪೂಜೆ ಆಚರಣೆ.

 ಶೈಕ್ಷಣಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಾಗೂ ತುಳಸಿ ಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.  ಜಗಮಗಿಸುವ ವಿದ್ಯುತ್ ದೀಪಲಂಕಾರದಿಂದ ಕಾಲೇಜು ಕಂಗೊಳಿಸಿದ್ದು ಮಾತ್ರವಲ್ಲದೆ ವಿಶಿಷ್ಟ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಬಣ್ಣದ ಚಿತ್ತಾರವನ್ನೇ ಸೃಷ್ಟಿಸಿತು.

ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ  ಅಂತರ್ ರಾಷ್ಟ್ರೀಯ ಖ್ಯಾತಿಯ ಜಾದೂಗಾರ ಶ್ರೀ ಸತೀಶ್ ಹೆಮ್ಮಾಡಿ ಮತ್ತು ಬಳಗದವರಿಂದ ‘ ಮಿರಾಕಲ್ ಮ್ಯಾಜಿಕ್  ಜಾದೂ ಪ್ರದರ್ಶನ ನಡೆಯಿತು. ಈ ಎಲ್ಲಾ ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಸ್ಥಾಪಕರುಗಳಾದ ಶ್ರೀ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್ ಎಲ್, ಗಣನಾಥ ಶೆಟ್ಟಿ ಬಿ,  ಆದರ್ಶ ಎಂ ಕೆ , ವಿಮಲ್ ರಾಜ್ ಗಣಪತಿ ಭಟ್ ಕೆ ಎಸ್ , ಅಮೃತ್ ಯು ರೈ ಸಾಕ್ಷಿಭೂತರಾದರು.

ದೀಪಾವಳಿ ಹಬ್ಬದ ಆಚರಣೆಯ ವಿಶೇಷತೆ ಹಾಗೂ ಮಹತ್ವದ ಬಗ್ಗೆ ಲೋಹಿತ್ ಎಸ್ ಕೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕ ವಿನಾಯಕ ಜೋಗ್ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕ ವರ್ಗದವರು, ಪೋಷಕ ವರ್ಗದವರು ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments