ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ನೆಚ್ಚಿನ ಕಂಬಳದ ಕೋಣವಾಗಿದ್ದ ನಂದಳಿಕೆಯ ‘ಪಾಂಡು’ ಇಂದು (ಸೆ. 28) ಮುಂಜಾನೆ ಅನಾರೋಗ್ಯದಿಂದ ನಿಧನ ಹೊಂದಿದೆ.
ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯ ಹಿರಿಯ ಸದಸ್ಯನಂತೆ ಬೆಳೆದು ಬಂದಿದ್ದ ಪಾಂಡು, ತನ್ನ ಮಿಂಚಿನ ಓಟ ಹಾಗೂ ಅದ್ಭುತ ಪ್ರದರ್ಶನಗಳ ಮೂಲಕ ಕಂಬಳಾಭಿಮಾನಿಗಳ ಮನಗೆದ್ದಿತ್ತು. ಸುಮಾರು 8 ವರ್ಷಗಳ ಕಾಲ ಚಾಂಪಿಯನ್ ಆಗಿ ಮೆರೆದಿದ್ದ ಪಾಂಡು, ವಿವಿಧ ಕಂಬಳ ಸ್ಪರ್ಧೆಗಳಲ್ಲಿ 150ಕ್ಕೂ ಹೆಚ್ಚು ಪದಕಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡು ಗಮನ ಸೆಳೆದಿತ್ತು.



























