Tuesday, November 17, 2026
Google search engine
Homeಕಾರ್ಕಳಕಾರ್ಕಳದ ಬಹುದಿನಗಳ ಕನಸು ನನಸು: ಯೋಜನಾ ಪ್ರಾಧಿಕಾರ ಮಂಜೂರುಗೊಳಿಸಿದ ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು...

ಕಾರ್ಕಳದ ಬಹುದಿನಗಳ ಕನಸು ನನಸು: ಯೋಜನಾ ಪ್ರಾಧಿಕಾರ ಮಂಜೂರುಗೊಳಿಸಿದ ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಅಭಿನಂದನೆ

ಕಾರ್ಕಳದ ಜನತೆಯ ಹಲವು ವರ್ಷದ ಬೇಡಿಕೆಯಾಗಿದ್ದ ಯೋಜನಾ ಪ್ರಾಧಿಕಾರವನ್ನು ರಾಜ್ಯ ಸರ್ಕಾರವು ಕಾರ್ಕಳಕ್ಕೆ ನೀಡಿದ್ದು ಇದು ಕಾರ್ಕಳದ ಜನತೆಯ ಪಾಲಿಗೆ ಅತ್ಯಂತ ಸಂತಸದ ಕ್ಷಣವಾಗಿದೆ. ಕಾರ್ಕಳದ ಜನರ ಸಂಕಷ್ಟಕ್ಕೆ ಸ್ಪಂದಿಸಿ ನೂತನ ಆದೇಶವನ್ನು ಹೊರಡಿಸಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಲ್ಲಿಯ ತನಕ ಏಕ ವಿನ್ಯಾಸಕ್ಕಾಗಿ, ಭೂ ಪರಿವರ್ತನೆಗಾಗಿ ಕಾಪು ಯೋಜನಾ ಪ್ರಾಧಿಕಾರಕ್ಕೆ ಮತ್ತು ಉಡುಪಿಗೆ ಅಲೆದಾಡುತ್ತಿದ್ದ ಜನರಿಗೆ ರಾಜ್ಯ ಸರ್ಕಾರದ ಈ ಆದೇಶದಿಂದ ನಿಟ್ಟಿಸಿರು ಬಿಡುವಂತಾಗಿದೆ. ಅತ್ಯಂತ ಅಗತ್ಯದ ಭೂ ದಾಖಲೆಗಳನ್ನು ಹೊಂದಿಸಲು ಕಾರ್ಕಳದ ಜನತೆಯು ದೂರದ ಊರಿಗೆ ಅಲೆದಾಡುವ ಪ್ರಮೇಯವು ಇನ್ನು ಮುಂದೆ ತಪ್ಪಲಿದೆ.‌ ಸರ್ಕಾರದ ಈ ಆದೇಶದಿಂದ ಕಾರ್ಕಳದಲ್ಲಿ ಮತ್ತೆ ಕಟ್ಟಡ ನಿರ್ಮಾಣ ಕ್ಷೇತ್ರವು ಗರಿಗೆದರಲ್ಲಿದ್ದು ಜನತೆಗೆ ಇದರಿಂದ ಮಹತ್ವದ ಅನುಕೂಲವಾಗಲಿದೆ ಜೊತೆಗೆ ವಿಫುಲ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments