Monday, November 16, 2026
Google search engine
Homeಕಾರ್ಕಳಕಾರ್ಕಳ:ಡಿ.13ರಂದು ಕಲಾಕೃಷಿ ಚಿತ್ರಕಲಾ ಪ್ರದರ್ಶನ ಕಲಾವಿದರಿಂದ ಚಿತ್ರಗಳ ಆಹ್ವಾನ

ಕಾರ್ಕಳ:ಡಿ.13ರಂದು ಕಲಾಕೃಷಿ ಚಿತ್ರಕಲಾ ಪ್ರದರ್ಶನ ಕಲಾವಿದರಿಂದ ಚಿತ್ರಗಳ ಆಹ್ವಾನ

ಕಾರ್ಕಳ:ಡಿ.13ರಂದು ಕಲಾಕೃಷಿ ಚಿತ್ರಕಲಾ ಪ್ರದರ್ಶನ

ಕಲಾವಿದರಿಂದ ಚಿತ್ರಗಳ ಆಹ್ವಾನ

ಕಾರ್ಕಳ: ಕೃಷಿ ಬದುಕು, ಕೃಷಿ ಸಂಸ್ಕೃತಿ ಹಾಗೂ ಕೃಷಿಕರ ಜೀವನಶೈಲಿಯನ್ನು ಚಿತ್ರಕಲೆಯ ಮೂಲಕ ಪರಿಚಯಿಸುವ ಉದ್ದೇಶದಿಂದ ಕಾರ್ಕಳದ ಮಾನಸ ಆರ್ಟ್ ಫೌಂಡೇಶನ್ ವತಿಯಿಂದ ‘ಕಲಾಕೃಷಿ – ನಮ್ಮ ಬದುಕಿನ ಬಣ್ಣ’ ಎಂಬ ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಕಳ ತಾಲೂಕಿನ ಬಾರಾಡಿಯ ಶೃಂಗ ಶ್ಯಾಮಲಾ ಎಸ್ಟೇಟ್‌ನಲ್ಲಿ ಈ ಪ್ರದರ್ಶನವು ಡಿ.13ರಂದು ನಡೆಯಲಿದೆ. ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ.ಈ ಹಿನ್ನೆಲೆಯಲ್ಲಿ ಕೃಷಿ ಬದುಕು, ಕೃಷಿ ಕಸುಬು ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳನ್ನಾಧರಿಸಿದ ಕ್ಯಾನ್ವಾಸ್ ಚಿತ್ರಗಳನ್ನು ರಚಿಸುವ ಕಲಾವಿದರಿಂದ ಚಿತ್ರಗಳನ್ನು ಆಹ್ವಾನಿಸಲಾಗಿದೆ.

ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಹೆಚ್ಚಿನ ಮಾಹಿತಿಗಾಗಿ 9980358653 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments