2021ರಲ್ಲಿ ನಕ್ರೆ ಆನಂದಿ ಮೈದಾನದಲ್ಲಿ ನಡೆದಿದ್ದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಹಿಂದೂ ಜಾಗರಣ ವೇದಿಕೆಯ ಮುಖಂಡರಿಗೆ ನ್ಯಾಯಾಲಯದಲ್ಲಿ ಜಯ ದೊರೆತಿದೆ.
ಕಾರ್ಕಳದ ನಕ್ರೆ ಆನಂದಿ ಮೈದಾನದಲ್ಲಿ ಅನಧಿಕೃತ ಮತಾಂತರ ಕೇಂದ್ರ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಗುರುಪ್ರಸಾದ್ ನಾರಾವಿ, ಪ್ರಕಾಶ್ ಕುಕ್ಕೆಹಳ್ಳಿ, ರಮೇಶ್ ಶೆಟ್ಟಿ, ಪ್ರಶಾಂತ್ ನಾಯಕ್, ಸುನಿಲ್ ಗುಂಡಾಜೆ, ಸಂದೀಪ್ ಕಾರ್ಲಾ, ಸುಜಿತ್ ಸಫಾಲಿಗ ಹಾಗೂ ಉಮೇಶ್ ರಂಗಣ್ಣಪಾಲಿಕೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಾರ್ಕಳದ ವಕೀಲರಾದ ಮಣಿರಾಜ್ ಶೆಟ್ಟಿ ಹಾಗೂ ಸುನಿಲ್ ಅವರು ಕಾನೂನು ಹೋರಾಟದಲ್ಲಿ ವಕಾಲತ್ತು ವಹಿಸಿದ್ದರು. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮುಖಂಡರಿಗೆ ಜಯ ದೊರೆತಿದೆ.































