Monday, November 16, 2026
Google search engine
Homeಕಾರ್ಕಳಕಾರ್ಕಳ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಕಾರ್ಕಳ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ದೈಹಿಕ ಶಕ್ತಿಯೇ ದೇಶದ ಶಕ್ತಿ : ಸೀತಾನದಿ ವಿಠಲ ಶೆಟ್ಟಿ ಅಭಿಮತ

ವ್ಯಕ್ತಿ ಸದೃಢನಾಗಿರಲು ಕ್ರೀಡೆಯು ಬಹುಮುಖ್ಯ ಪಾತ್ರವಹಿಸುತ್ತದೆ. ದೈಹಿಕ ಶಕ್ತಿಯೇ ದೇಶದ ಶಕ್ತಿಯಾದಾಗ ಆರೋಗ್ಯಶಾಲಿ ಭಾರತ ನಿರ್ಮಾಣವಾಗಲು ಸಾಧ್ಯ. ಜ್ಞಾನಸುಧಾ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿದೆ ಎಂದು ಭಾವಿಸಿದ್ದೆ. ಆದರೆ ಇಲ್ಲಿನ ಸದಾ ಹಸಿರು-ಹಸಿರಾಗಿ ನಳನಳಿಸುತ್ತಿರುವ ಗಣಿತನಗರ ಕ್ರೀಡಾಂಗಣ ರಾಜ್ಯ-ರಾಷ್ಟçಮಟ್ಟದ ಬೇರೆ-ಬೇರೆ ಮಾದರಿಯ ಕ್ರೀಡಾಂಗಣಕ್ಕಿAತಲೂ ಅತ್ಯುತ್ತಮವಾಗಿದೆ. ಮೂವರು ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ, 26 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳುವ ಮೂಲಕ ಶಿಕ್ಷಣ-ಕ್ರೀಡೆ-ಸಾಂಸ್ಕೃತಿಕ-ಶಿಸ್ತು ಒಳಗೊಂಡ ಪರಿಪೂರ್ಣ ಸಂಸ್ಥೆ ಜ್ಞಾನಸುಧಾ ಎಂದು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಸೀತಾನದಿ ವಿಠಲ ಶೆಟ್ಟಿ ನುಡಿದರು.ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಹೆರಾಡಿ- ಬಾರ್ಕೂರಿನ ಕಟಿಲೇಶ್ವರಿ ಡೆವಲಪರ್ಸ್ನ ಎಂ.ಡಿ ಆಗಿರುವ  ಪ್ರಕಾಶ್ ಶೆಟ್ಟಿಯವರು ಮಾತನಾಡಿ, ಪಂದ್ಯಾಟದಲ್ಲಿ ಸೋಲು-ಗೆಲುವುಗಳನ್ನು ಪರಿಗಣಿಸದೆ ಕ್ರೀಡೆ ಗೆಲ್ಲಬೇಕು ಎಂಬ ಮನೋಭಾವ ಪ್ರತಿಯೊಬ್ಬನದ್ದಾಗಿರಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಸುದಾ, ದೇಶಸುಧಾ, ಸಿಬ್ಬಂದಿಗಳ ಪೋಷಕರಿಗೆ ಪಾದಪೂಜೆ, ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ಪ್ರೋತ್ಸಾಹ ಧನ ವಿತರಣೆ ನಡೆಸುವ ಮೂಲಕ ಸ್ಫೂರ್ತಿಯನ್ನು ತುಂಬುತ್ತಿರುವ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ  ದಿನೇಶ್ ಎಂ ಕೊಡವೂರ್ ವಹಿಸಿದ್ದರು. ರ‍್ನ್ಲರ‍್ನ್ ಬಿಸ್‌ನೆಸ್ ಪೈರ್ ಉದ್ಘಾಟನೆ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ ರ‍್ನ್ಲರ‍್ನ್ ಬಿಸ್‌ನೆಸ್ ಪೈರನ್ನು ಉದ್ಘಾಟಿಸಲಾಯಿತು.

ಇದೇ ಸಂಧರ್ಭ ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಉಷಾ ರಾವ್ ಯು ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಶಾಲೆ-ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕ ಸಂದೀಪಾ, ವ್ಯವಹಾರ ಅಧ್ಯಯನದ ಉಪನ್ಯಾಸಕ  ಶೈಲೇಶ್ ಶೆಟ್ಟಿ ಹಾಗೂ ಸಂಸ್ಥೆಯ ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಮತ್ತು ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆಯವರು ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments