Tuesday, September 29, 2026
Google search engine
Homeಕಾರ್ಕಳಮುಂಬಯಿ ಯಕ್ಷಗಾನ ಸಮ್ಮೇಳನದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಗ್ರಂಥ ಬಾಗಿನ

ಮುಂಬಯಿ ಯಕ್ಷಗಾನ ಸಮ್ಮೇಳನದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಗ್ರಂಥ ಬಾಗಿನ

ಅಜೆಕಾರು ಕಲಾ ಬಳಗ ಸ್ಥಾಪನೆಯಾಗಿ ಇಪ್ಪತ್ತೈದು ವರ್ಷ ತುಂಬಿದ ಹಿನ್ನೆಲೆಯಲ್ಲಿ
ಕಳೆದ ಕಾಲು ಶತಮಾನದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮಾಡಿದ ಸಾಧನೆಗಳನ್ನು ದಾಖಲಿಸಿರುವ
ಭಾಗ್ಯನಗರಿಯ ಮಡಿಲಲ್ಲಿ ಬೆಳ್ಳಿ ಬಿಟ್ಟ ಬಳ್ಳಿಯ ಇತಿಹಾಸ- ಯಕ್ಷ ರಜತ (ಅಜೆಕಾರು ಕಲಾಭಿಮಾನಿ ಬಳಗದ ಯಕ್ಷಕಲಾ ಯಾನ) ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಅಕ್ಟೋಬರ್ 4 ರಂದು ಮಧ್ಯಾಹ್ನ 2.30ಕ್ಕೆ ಬಂಟರ ಭವನದ ರಾಧಾಬಾಯಿ.ಟಿ. ಭಂಡಾರಿ ಸಭಾಂಗಣದಲ್ಲಿ ನಡೆಯಲಿರುವ ಮುಂಬಯಿ ಯಕ್ಷಗಾನ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ.

ಈ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಪ್ರೊ.ಜಿ.ಎನ್.ಉಪಾಧ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕೃತಿಗೆ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು ಮುನ್ನುಡಿಯನ್ನು ಬರೆದಿದ್ದು ಅಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ 124ನೆಯ ಪ್ರಕಟಣೆಯಾದ ಈ ಕೃತಿಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ರಚಿಸಿದ್ದು, ವೈಶಾಲಿ ಶೆಟ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಕರಾದ ಅಜೆಕಾರು ಬಾಲಕೃಷ್ಣ ಅವರಿಗೆ ಅಂದು ಗ್ರಂಥಬಾಗಿನ ಸಮರ್ಪಿಸಲಾಗುವುದು ಎಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments