Monday, October 26, 2026
Google search engine
Homeಕಾರ್ಕಳಬೆಳ್ಮಣ್ ವಲಯ ಬಂಟರ ಸಂಘದ ಸಭಾಭವನಕ್ಕೆ ಶಿಲಾನ್ಯಾಸ

ಬೆಳ್ಮಣ್ ವಲಯ ಬಂಟರ ಸಂಘದ ಸಭಾಭವನಕ್ಕೆ ಶಿಲಾನ್ಯಾಸ

“ಸಮಾಜದಲ್ಲಿ ನಾವು ಶಾಶ್ವತವಲ್ಲ; ಬದಲಾಗಿ ನಮ್ಮ ಸೇವೆ, ಕರ್ತವ್ಯ ಹಾಗೂ ಕೀರ್ತಿಗಳು ಶಾಶ್ವತ” ಎಂದು ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಹೇಳಿದರು.

ಅವರು ರವಿವಾರ ಬೋಳ ಮಣ್ ಬೆಟ್ಟು ಬಲ್ಯಾರ್ ದಡ್ಡು ರಾಮ್ ದೇವ್ ಅವರ ಬಳಿ ನಂದಳಿಕೆ ಶ್ರೀ ಮಾತಾ ಕೀರ್ತಿಶೇಷ ಬೋಳ ಸುಬ್ಬಯ ವಿ. ಶೆಟ್ಟಿ ವೇದಿಕೆಯಲ್ಲಿ ನಡೆದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನದ ಶಿಲಾನ್ಯಾಸ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಮಾವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬೆಳ್ಮಣ್, ನಂದಳಿಕೆ, ಸೂಡಾ, ಬೋಳ, ಕೆದಿಂಜೆ, ಕಲ್ಯಾ ಹಾಗೂ ಕಾಂತಾವರ ಗ್ರಾಮಗಳ ಒಕ್ಕೂಟದ ಸಂಘದ ಈ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಬಡವರಲ್ಲಿ ದೇವರನ್ನು ಕಾಣುವುದು ಬಂಟರ ಗುಣವಾಗಿದ್ದು, ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವೂ ನಡೆಯಬೇಕು ಎಂದರು.

ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಳದ ಅರ್ಚಕ ಶ್ರೀನಿವಾಸ ಭಟ್ ಹಾಗೂ ಸಂಘದ ಸ್ಥಾಪಕ ಗೌರವಾಧ್ಯಕ್ಷ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ವಿಠ್ಠಲ ಶೆಟ್ಟಿ ಬೇಲಾಡಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಂಬೈನ ಉದ್ಯಮಿ ಬೋಳ ಬಲ್ಯಾರ್ ದಡ್ಡು ರಾಮ್ ದೇವ್ ಶ್ರೀ ಬಿ. ರಘುರಾಮ ಕೆ. ಶೆಟ್ಟಿ, ಮುಂಬೈ ಕೃಷ್ಣ ಪ್ಯಾಲೇಸ್‌ನ ಮಾಲಕ ನಂದಳಿಕೆ ಕೃಷ್ಣ ಧಾಮ ಕೃಷ್ಣ ವೈ. ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಜಾಗತಿಕ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಭಾಭವನದ ಸ್ಥಳದಾನಿಗಳಾದ ಶ್ರೀಮತಿ ರೂಪರಾಣಿ ಶೋಧನ್ ಕುಮಾರ್ ಶೆಟ್ಟಿ ದಂಪತಿ ಹಾಗೂ ಮಕ್ಕಳಾದ ಸ್ವರೂಪ್ ಶೆಟ್ಟಿ ಮತ್ತು  ಮಾನ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಣ್ ಬೆಟ್ಟು ಸುಜಾತಾ ರಮೇಶ್ ಶೆಟ್ಟಿ ಅವರ ಪರವಾಗಿ ಕಾಂತಿ ಸುಭಾಷ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.

ಸಭಾಭವನ ನಿರ್ಮಾಣಕ್ಕೆ ಪ್ರೇರಕ ಶಕ್ತಿಗಳಾದ ಬೋಳ ಬಲ್ಯಾರ್ ದಡ್ಡು ರಘುರಾಮ ಕೆ. ಶೆಟ್ಟಿ ದಂಪತಿ ಹಾಗೂ ನಂದಳಿಕೆ ಕಾಪಿಕೆರೆ ಕೃಷ್ಣ ಧಾಮ ಕೃಷ್ಣ ವೈ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಗುರುತಿಸಲಾಯಿತು.

ಸಾಧಕ ಬಾಲ ಪ್ರತಿಭೆಗಳಾದ ರಿಶಾ ಆರ್. ಶೆಟ್ಟಿ ಹಾಗೂ ಸಾತ್ವಿಕ ಭಾಸ್ಕರ ಆಳ್ವ, ವಿಶೇಷ ಸಾಧಕರಾದ ಡಾ. ರಶ್ಮಿ ಶೆಟ್ಟಿ, ಕಾನಬೆಟ್ಟು ನಂದಳಿಕೆ ಹಾಗೂ ವಿವೇಕಾನಂದ ಶೆಟ್ಟಿ, ನಂದಳಿಕೆ ಅವರನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೆಜತ್ತಬೆಟ್ಟು ಬೋಳ ವರದಿ ಮಂಡಿಸಿದರು. ಕೋಶಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಗುಂಡುಕಲ್ಲು ಬೋಳ ಅಂದಾಜು ಪಟ್ಟಿ ಮಂಡಿಸಿದರು. ಮಾಧ್ಯಮ ಸಲಹೆಗಾರ ಸತೀಶ್ ಶೆಟ್ಟಿ ಅಗ್ಯೊಟ್ಟು ಹಾಗೂ ನಿಶ್ಮಿತಾ ಶೆಟ್ಟಿ ಮೂಡುಮನೆ ಬೋಳ ಅಭಿನಂದನ ಪತ್ರ ವಾಚಿಸಿದರು.

ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ವಿಕಾಸ್ ಶೆಟ್ಟಿ ಬೋಳ ಪರಾರಿ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments