Monday, October 26, 2026
Google search engine
Homeಕಾರ್ಕಳಕಾರ್ಕಳದ ಯೋಗ ಸಾಧಕ ಕೆ. ಅಶೋಕ ಕುಮಾರ್ ಅವರಿಗೆ “ಯೋಗ ಶ್ರೀ” ಪ್ರಶಸ್ತಿ ಪ್ರದಾನ

ಕಾರ್ಕಳದ ಯೋಗ ಸಾಧಕ ಕೆ. ಅಶೋಕ ಕುಮಾರ್ ಅವರಿಗೆ “ಯೋಗ ಶ್ರೀ” ಪ್ರಶಸ್ತಿ ಪ್ರದಾನ

ಕಾರ್ಕಳ: ಬೆಂಗಳೂರಿನ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಬೆಂಗಳೂರಿನ ಜೆ.ಸಿ. ರಸ್ತೆಯ ಸರ್ ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್‌ನಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2025-26’ ಕಾರ್ಯಕ್ರಮದಲ್ಲಿ ಕಾರ್ಕಳದ ಪ್ರತಿಭಾವಂತ ಯೋಗ ಸಾಧಕ ಹಾಗೂ ಯೋಗ ಶಿಕ್ಷಕ ಶ್ರೀ ಕೆ. ಅಶೋಕ ಕುಮಾರ್ ಅವರಿಗೆ ಪ್ರತಿಷ್ಠಿತ “ಯೋಗ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯೋಗ ಕ್ಷೇತ್ರದಲ್ಲಿ ಸಾಧನೆಗೈದಿರುವ ಕೆ. ಅಶೋಕ ಕುಮಾರ್ ಅವರು ಯೋಗ ಗುರು ಶ್ರೀ ಕೆ. ನರೇಂದ್ರ ಕಾಮತ್ ಅವರ ಶಿಷ್ಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮತ್ತು ಯೋಗ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments