Monday, November 2, 2026
Google search engine
Homeಕಾರ್ಕಳ28 ರಾಜ್ಯಗಳ, 28 ಭಾಷೆಗಳ ಹಾಡುಗಳನ್ನು ನಿರಂತರ 28 ಗಂಟೆಗಳ ಕಾಲ ಹಾಡುವ ವರ್ಲ್ಡ್ ರೆಕಾರ್ಡ್...

28 ರಾಜ್ಯಗಳ, 28 ಭಾಷೆಗಳ ಹಾಡುಗಳನ್ನು ನಿರಂತರ 28 ಗಂಟೆಗಳ ಕಾಲ ಹಾಡುವ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದ ಯಶವಂತ್ ಎಂ.ಜಿ

ರಾಜ್ಯದ ಖ್ಯಾತ ಗಾಯಕ, ಮೂಡುಬಿದಿರೆಯವರಾದ ವಿದ್ವಾನ್ ಯಶವಂತ ಎಂ.ಜಿ ಅವರು ಭಾರತದ ಏಕತೆ, ಅಖಂಡತೆ, ಭಾಷಾ ವೈವಿಧ್ಯತೆಯನ್ನು ಸಾರುವ ನಿಟ್ಟಿನಲ್ಲಿ 28 ರಾಜ್ಯಗಳ, 28 ಭಾಷೆಗಳ ಹಾಡುಗಳನ್ನು ನಿರಂತರ 28 ಗಂಟೆಗಳ ಕಾಲ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದರು.

ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಡಾ.ರಾಜ್ ಕುಮಾರ್ ಆಡಿಟೋರಿಯಂನಲ್ಲಿ ಅ.28 ರಂದು ಮಧ್ಯಾಹ್ನ 1 ಗಂಟೆಗೆ ಹಿನ್ನೆಲೆ ಗಾಯನದೊಂದಿಗೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿನೊಂದಿಗೆ ಗಾಯನ ಆರಂಭಿಸಿದ ಯಶವಂತ್ ಅವರು ಆ.29 ರಂದು ಸಂಜೆ 5 ಗಂಟೆಯವರೆಗೆ ನಿರಂತರ 28 ಗಂಟೆಗಳ ಕಾಲ ಹಾಡುವ ಮೂಲಕ ಈ ದಾಖಲೆ ನಿರ್ಮಿಸಿದರು.

ಕಳೆದ ವರ್ಷ ಜೂನ್ ಮತ್ತು 4ರಂದು ಮಂಗಳೂರು ಪುರಭವನದಲ್ಲಿ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಪ್ರಯುಕ್ತ ಅವರು ಹಾಡಿದ ಹಾಡುಗಳನ್ನು ನಿರಂತರ 24 ಗಂಟೆಗಳ ಕಾಲ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದು ಮತ್ತೆ 28ಗಂಟೆಗಳ ಕಾಲ ಹಾಡುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿ ಕೊಂಡರು. ಅವರೊಂದಿಗೆ ಹಿನ್ನೆಲೆ

ಸಂಗೀತದಲ್ಲಿ ರಾಜುಗೋಪಾಲ್ ಆಚಾರ್ಯ (ಗಿಟಾರ್), ವಾಮನ್ ಕುಮಾರ್(ರಿದಮ್ ಪ್ಯಾಡ್), ಪ್ರಜ್ವಲ್ ಆಚಾರ್ಯ, ವೀಕ್ಷಿತ್ ಕೊಡಂಚ (ತಬಲ,) ಗಣೇಶ್ ಕೆ.ಎಸ್. ಹಾಗೂ ವರ್ಷಾ (ಕೊಳಲು), ಸುಮುಖ ಆಚಾರ್ಯ (ಸಿತಾರ್), ಮೆಲ್ವಿನ್ (ಕೀ ಬೋರ್ಡ್) ನಲ್ಲಿ ಸಹಕರಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ಎಷ್ಟೊಯಿ ಪ್ರಮಾಣ ಪತ್ರವನ್ನು ಯಶವಂತ್ ಅವರಿಗೆ ಹಸ್ತಾಂತರಿಸಿದರು.

ಪುರಂದರ ದೇವಾಡಿಗ, ಸುಶಾಂತ್ ಭಂಡಾರಿ, ಮಹಾಲಕ್ಷ್ಮೀಪುರಂ ಗೋಪಾಲಯ್ಯ, ಕಾಪು ಶಾಸಕ ಸುರೇಶ ಶೆಟ್ಟಿ ಗುರ್ಮೆ, ಸತೀಶ್ ಮುಳ್ಳೂರು, ಮಹೇಶ್ ತಾಕೂರು ಉಡುಪಿ ಉಪಸ್ಥಿತರಿದ್ದು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಕಾರ್ಯಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಹರ್ಷ ಮುತಾಲಿಕ್ ಬೆಂಗಳೂರು, ಪ್ರಕಾಶ್ ಮಲ್ಪೆ, ಸುದರ್ಶನ್ ಮೂಡಬಿದಿರೆ, ಸಂದೀಪ್ ಉದ್ಯಮಿಗಳು (ಉಡುಪಿ ಆರಾದ್ಯ )ಸುಜಾನ್ ಮೂರ್ತಿ ಬೆಂಗಳೂರು, ಭರತ್ ಶೆಟ್ಟಿ ಬೆಂಗಳೂರು, ಅಪೇಕ್ಷಾ ಜೈನ್, ಮಾತೋಶ್ರೀ ಹೇಮಾವತಿ, ಸಮಾರೋಪ ಆರಂಭದಲ್ಲಿ ಇದ್ದು ಅರುಣಾ ಭಟ್ ಮೊಗಸಾಲೆ ಕಾರ್ಯಕ್ರಮ ನಿರೂಪಿಸಿದ್ದು ನೂರಾರು ಮಂದಿ ಸಂಗೀತಾಭಿಮಾನಿಗಳು ಉಪಸ್ಥಿತರಿದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments