ಕಾರ್ಕಳ: ಜ್ಯೋತಿ ಯುವಕ ಮಂಡಲ ಮತ್ತು ಜ್ಯೋತಿ ಮಹಿಳಾ ಮಂಡಲ (ರಿ.) ಕಾಳಿಕಾಂಬ, ಕಾರ್ಕಳ ಇವರ ಆಶ್ರಯದಲ್ಲಿ, ಪಲ್ಲವಿ ಡೆಕೋರೇಟರ್ಸ್ ಕಾಳಿಕಾಂಬ ಕಾರ್ಕಳ ಇವರ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಇಂದು(ನ.೦7) ರಂದು ಸಂಜೆ 7.3೦ ತುಳು ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಬಲೆ ತೆಲಿಪಾಲೆ, ಮಜಾಭಾರತ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಟ ‘ತೆಲಿಕೆದ ತೆನಾಲಿ’ ಸುನಿಲ್ ನೆಲ್ಲಿಗುಡ್ಡೆ ಅವರ ನೇತೃತ್ವದ ‘ತೆಲಿಕೆದ ತೆನಾಲಿ’ ತಂಡದಿಂದ ‘ರಾಯರುಲ್ಲೆರ್’ ಎಂಬ ಭಕ್ತಿ ಪ್ರಧಾನ, ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಕಾರ್ಕಳದ ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ನಾಟಕ ಪ್ರದರ್ಶನ ನಡೆಯಲಿದ್ದು, ಕಥೆ, ರಚನೆ ಮತ್ತು ಸಂಭಾಷಣೆಯನ್ನು ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ನಿರ್ವಹಿಸಿದ್ದಾರೆ. ನಿರ್ದೇಶನವನ್ನು ರಮಾನಂದ್ ನಾಯಕ್ ಜೋಡುರಸ್ತೆ, ಸಂಗೀತವನ್ನು ದೀಪಕ್ ವೇಣೂರು ಹಾಗೂ ಸಮಗ್ರ ನಿರ್ವಹಣೆಯನ್ನು ‘ರಂಗದ ಪಿಲಿ’ ಲತೀಫ್ ಸಾಣೂರು ವಹಿಸಿಕೊಂಡಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮನರಂಜನೆಯ ಮೆರುಗು ನೀಡುವ ಈ ನಾಟಕ ಪ್ರದರ್ಶನಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ತಿಳಿಸಿದ್ದಾರೆ.































