Friday, November 13, 2026
Google search engine
Homeಕಾರ್ಕಳಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ’ ಮಾಡುತ್ತಿರುವ ಹಕ್ಕುತ್ತಾಯ ಹೋರಾಟಕ್ಕೆ  ಕಾರ್ಕಳ ತಾಲೂಕು ಬಿಜೆಪಿ ಸಂಪೂರ್ಣವಾಗಿ...

ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ’ ಮಾಡುತ್ತಿರುವ ಹಕ್ಕುತ್ತಾಯ ಹೋರಾಟಕ್ಕೆ  ಕಾರ್ಕಳ ತಾಲೂಕು ಬಿಜೆಪಿ ಸಂಪೂರ್ಣವಾಗಿ ಬೆಂಬಲ

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡAತೆ ಕರಾವಳಿ ಪ್ರದೇಶದ ಜನರ ಅನುಕೂಲಕ್ಕಾಗಿ ಹಾಗೂ ನ್ಯಾಯಾದಾನದಲ್ಲಿ ಆಗುತ್ತಿರುವ ಅನಗತ್ಯ ವಿಳಂಭ ಮತ್ತು ಆರ್ಥಿಕ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕರಾವಳಿ ಹೈಕೋರ್ಟ್ ಪೀಠ ಸ್ಥಾಪಿಸುವ ಬಗ್ಗೆ ‘ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ’ ಮಾಡುತ್ತಿರುವ ಹಕ್ಕುತ್ತಾಯ ಹೋರಾಟಕ್ಕೆ  ಕಾರ್ಕಳ ತಾಲೂಕು ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸಲಿದೆ.

ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 80 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಇಲ್ಲಿನ ಜನತೆ ವಿದ್ಯಾವಂತರಾಗಿದ್ದಾಗ್ಯೂ ನ್ಯಾಯಕ್ಕಾಗಿ ದೂರದ ಬೆಂಗಳೂರಿಗೆ ಅಲೆದಾಡಬೇಕಾಗಿರುವುದರಿಂದ ಹಣ, ಸಮಯ ವ್ಯರ್ಥವಾಗುವುದರೊಂದಿಗೆ ನ್ಯಾಯದಾನದಲ್ಲಿಯೂ ಆಗುತ್ತಿರುವ ವಿಳಂಭವನ್ನು ಗಮನಿಸಿ ಈ ಪ್ರದೇಶದ ಜನರ ಬಹುದಿನದ ಬೇಡಿಕೆಯಾದ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಆ ಮೂಲಕ ಈ ಪ್ರದೇಶದ ದಾವೆದಾರರಿಗೆ ತ್ವರಿತ ಗತಿಯಲ್ಲಿ ನ್ಯಾಯ ಸಿಗುವಂತಾಗಲು ಮಾತ್ರವಲ್ಲದೇ ಈ ಪ್ರದೇಶದ ಸಾಮಾಜಿಕ, ಔದ್ಯೋಧಿಕ ರಂಗದಲ್ಲಿ ಅಭಿವೃದ್ಧಿ, ಜಿಲ್ಲೆಯ ಜನತೆಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ಈ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಹೈಕೋರ್ಟ್ ಪೀಠ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾರ್ಕಳ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಕಳ ತಾಲೂಕಿನ ಸಮಸ್ತ ಕಾರ್ಯಕರ್ತರು ಪಧಾಧಿಕಾರಿಗಳು ತಮ್ಮನ್ನು ತಾವು ತೊಡಕಿಸಿಕೊಳ್ಳುವುದರೊಂದಿಗೆ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಗೆ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments