ಶಾಂತಿ ನೃತ್ಯ ನಿಕೇತನ, ಕಾರ್ಕಳ ಇದರ 5ನೇ ವಾರ್ಷಿಕ ಮಹೋತ್ಸವ ‘ನೃತ್ಯಾರ್ಪಣಂ’ ಕಾರ್ಯಕ್ರಮವು ನವೆಂಬರ್ 28ರ ಶನಿವಾರ ಸಂಜೆ 5.30ರಿಂದ ಕಾರ್ಕಳದ ಕಾಳಿಕಾಂಬದಲ್ಲಿರುವ ಜ್ಯೋತಿ ಯುವಕ ಮಂಡಲದಲ್ಲಿ ನಡೆಯಲಿದೆ.
ವಿನಾಯಕ ಆಡಳಿತ ಮೊಕ್ತೇಸರರು, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆನೆಕೆರೆ ಇವರ ಸಹಕಾರದೊಂದಿಗೆ ಶಾಂತಿ ನೃತ್ಯ ನಿಕೇತನ (ಶಾಖೆಗಳು: ಮಂಗಳೂರು ಮತ್ತು ಕಟಪಾಡಿ) ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಂಜೆ 5.30ಕ್ಕೆ ದೀಪ ಪ್ರಜ್ವಲನೆ, 5.45ಕ್ಕೆ ಶಾಂತಿ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಮಂಗಳಾದೇವಿ ಮಂಗಳಾಂಬೆ’ ಎಂಬ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ಕಲಾತಪಸ್ವಿ ಕೆ.ಎಸ್. ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್, ಚಂದ್ರಶೇಖರ್ ಶೆಟ್ಟಿ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಶೆಟ್ಟಿ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ‘ಕಾಂತಾರ’ ಹಾಗೂ ‘ಸುಪ್ರಮ್ ಸೊ’ ಖ್ಯಾತಿಯ ನಟ ಮತ್ತು ಪ್ರಸಿದ್ಧ ಗಾಯಕ ಮೈಮ್ ರಾಮದಾಸ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮುಲ್ಕಿಯ ಸುವರ್ಣ ಆರ್ಟ್ಸ್ ಮಾಲಕ ಚಂದ್ರಶೇಖರ್ ಸುವರ್ಣ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭದ ರಾವ್, ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ದೇವಿಕಾ ಪ್ರಕಾಶ್ ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ.














