ಯಕ್ಷಗಾನ ತಡೆ ಪ್ರದರ್ಶನ ಬಿ.ಜೆ.ಪಿ ಹಾಗು ಕಾಂಗ್ರೆಸ್ ಮಧ್ಯೆ ರಾಜಕೀಯ ಅಸ್ತ್ರವಾಗಿ ಬಳಕೆ ಬೇಡ:ಕಲಾವಿದ ಸುರೇಶ ಆಚಾರ್ಯ.
ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ತಡೆ ಪ್ರಸಂಗ ಇದೀಗ ವಿವಿಧ ಪಕ್ಷಗಳ ರಾಜಕೀಯ ನಾಯಕರ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದ್ದು ಇದನ್ನು ನಿಲ್ಲಿಸಿದ್ದು ಸ್ಥಳೀಯ ದೂರಿನ ಮೇರೆಗೆ ಎಂದು ಅಜೆಕಾರು ಉಪಠಾಣಾಧಿಕಾರಿ ಈಶ್ವರ ಯಕ್ಷಗಾನ ಸಂಘಕ್ಕೆ ಜಾರಿ ಮಾಡಿರುವ ನೋಟಿಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ ಇದರಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ರ ಹೆಸರನ್ನು ಅನಗತ್ಯವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಎಳೆದು ತರಲಾಗುತ್ತಿದ್ದು ಇದಕ್ಕೆ ನಮ್ಮ ವಿರೋಧವಿದೆ.
ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಯಕ್ಷಗಾನ ಮುಂದುವರೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿ ನಮಗೆ ಕಾರ್ಯಕ್ರಮ ಮುಂದುವರೆಸಲು ಗರಿಷ್ಠ ಸಹಕಾರ ನೀಡಿದ್ದಾರೆಯೇ ಹೊರತು ತಡೆಯುವ ಪ್ರಯತ್ನ ಯಾರು ಮಾಡಿಲ್ಲ ಎಂದು ಈಶ್ವರ ಯಕ್ಷಗಾನ ಸಂಘದ ಸದಸ್ಯ ಸುರೇಶ್ ಆಚಾರ್ಯ ಸ್ಪಷ್ಡಪಡಿಸಿದ್ದಾರೆ ಅಲ್ಲದೆ ಅನಗತ್ಯವಾಗಿ ಇದರಲ್ಲಿ ರಾಜಕೀಯ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ.