ಯಕ್ಷಗಾನ ಪ್ರದರ್ಶನ ತಡೆ ಪ್ರಯತ್ನಕ್ಕೂ ಕಾಂಗ್ರೆಸ್ ಪಕ್ಷ ಹಾಗು ನಾಯಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ರಿಗೂ ಯಾವ ಸಂಬಂಧವೂ ಇಲ್ಲ:ಮುಂಡ್ಲಿ ಯುವ ಕಾಂಗ್ರೆಸ್ ಸ್ಪಷ್ಟನೆ.

0

ಯಕ್ಷಗಾನ ಪ್ರದರ್ಶನ ತಡೆ ಪ್ರಯತ್ನಕ್ಕೂ ಕಾಂಗ್ರೆಸ್ ಪಕ್ಷ ಹಾಗು ನಾಯಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ರಿಗೂ ಯಾವ ಸಂಬಂಧವೂ ಇಲ್ಲ:ಮುಂಡ್ಲಿ ಯುವ ಕಾಂಗ್ರೆಸ್ ಸ್ಪಷ್ಟನೆ.

ಇತ್ತೀಚೆಗೆ ಜಾರ್ಕಳ ಮುಂಡ್ಲಿ ಗ್ರಾಮದಲ್ಲಿ ನಡೆದ ಯಕ್ಷಗಾನ ತಡೆ ಪ್ರಯತ್ನದ ಹಿಂದೆ ಉದಯ್ ಕುಮಾರ್ ಶೆಟ್ರ ಹೆಸರನ್ನು ಎಳೆದು ತರುವ ಮೂಲಕ ತಮ್ಮ ರಾಜಕೀಯ ತೀಟೆಯನ್ನು ತೀರಿಸಿಕೊಳ್ಲುವ ಬಿ.ಜೆ.ಪಿ ನಾಯಕರ ಪ್ರಯತ್ನ ನಾಚಿಕೇಡಿನ ಪರಮಾವಧಿ ಎಂದು ಮುಂಡ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.
‌‌‌

ಯಕ್ಷಗಾನ ತಡೆ ಪ್ರಯತ್ನಕ್ಕೆ ಪೋಲಿಸರು ಮುಂದಾದಾಗ ಖುದ್ದು ಸಾರ್ವಜನಿಕರ ಮುಂದೆಯೇ ಉದಯ್ ಕುಮಾರ್ ಶೆಟ್ಟಿಯವರು ದೂರವಾಣಿ ಮೂಲಕವಾಗಿ ಅಜೆಕಾರು ಠಾಣಾ ಉಪನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದು ಯಕ್ಷಗಾನ ಯಾವುದೇ ತಡೆಯಿಲ್ಲದೆ ನಡೆಯಲು ಸಹಕಾರ ನೀಡಿದ್ದಾರೆ,ಈ ಬಗ್ಗೆ ಸ್ಪಷ್ಟನೆ ಬೇಕಾದಲ್ಲಿ ಅಲ್ಲಿದ್ದ ಸಾರ್ವಜನಿಕರನ್ನು‌ಅಥವಾ ಸಂಘಟಕರನ್ನು ಸಂಪರ್ಕಿಸಲಿ.

ಗ್ರಾಮದ ಕಾರ್ಯಕ್ರಮಗಳಲ್ಲಿ ಸಾಮರಸ್ಯದಿಂದ ಪಕ್ಷಾತೀತವಾಗಿ ಶ್ರಮವಹಿಸಿ ದುಡಿಯುವ ಗ್ರಾಮಸ್ಥರ ಮಧ್ಯೆ ವೈಷಮ್ಯ ಮೂಡಿಸಿ ರಾಜಕೀಯ ಬೇಳೆ ಬೇಯಿಸುವ ಬಿ.ಜೆ.ಪಿ ನಾಯಕರ ನಡೆಗೆ ನಮ್ಮ ಧಿಕ್ಕಾರವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

LEAVE A REPLY

Please enter your comment!
Please enter your name here