ಮುಡಾರು ಗ್ರಾಮ ಪಂಚಾಯತ್ ಮಕ್ಕಳ ವಿಶೇಷ ಗ್ರಾಮ ಸಭೆ
ಬಜಗೋಳಿ: ಮುಡಾರು ಗ್ರಾಮ ಪಂಚಾಯತ್ ನ ವಿ. ಎಸ್ ಆಚಾರ್ಯ ಸಭಾಭವನದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಶಾಲಾ ಮಕ್ಕಳ ವಿವಿಧ ಬೇಡಿಕೆಯನ್ನು ಸ್ವೀಕರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜಯವಂತರಾವ್ ರವರು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಕಾರ್ಯ ಕ್ರಮ ನಡೆಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ ಡಿ ಅತಿಕಾರಿ ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಲತಿ ನಾಯ್ಕ್, ವಿನಯ ಡಿ ಬಂಗೇರ, ಶಿವ ಪ್ರಸಾದ್. ಪ್ರಶಾಂತ್ ಕುಮಾರ್, ರಜತ್ ಆರ್. ಮೋಹನ್, ನೋಡೆಲ್ ಅಧಿಕಾರಿಯವರಾದ ಸಿದ್ದಪ್ಪ ತುಡುಬಿನ, ಶಿಶು ಅಭಿವೃದ್ಧಿ ಇಲಾಖೆಯ ಶಾಂಭವಿ. ಆರೋಗ್ಯ ಇಲಾಖೆಯ ಸುಂದರಿ ಬಿಆರ್, ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್ ಕಾರ್ಯಕ್ರಮ ನಿರ್ವಹಿಸಿದರು.