Monday, February 2, 2026
Google search engine
Homeಕಾರ್ಕಳಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕರಾವಳಿ ಜಿಲ್ಲೆಗಳಿಗೆ ನಿರಾಸೆಯನ್ನು ಉಂಟು ಮಾಡಿದೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅಭಿಪ್ರಾಯಪಟ್ಟಿದ್ದಾರೆ.

ಇದೊಂದು ಚುನಾವಣಾ ಬಜೆಟ್ ಆಗಿದ್ದು ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳಲ್ಲಿ ಪಕ್ಷ ಬಲವವರ್ದನೆಗಾಗಿಯೇ ಮಂಡಿಸಿರುವ ಬಜೆಟಿನಂತಿದೆ, ಈ ಬಜೆಟ್ನಿಂದ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವೂ ಇಲ್ಲ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದರೂ, ಕರಾವಳಿಯ ನೈಜ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಅವರು ಎಡವಿದ್ದಾರೆ. ಜನತೆಯ ಬೇಕು ಬೇಡಗಳಿಗೆ ಸ್ಪಂದಿಸಿ ಅತ್ಯುತ್ತಮ ಬಜೆಟ್ ನೀಡಬೇಕಾಗಿದ್ದ ಕೇಂದ್ರ ಸರ್ಕಾರವು ಕೇವಲ ತನ್ನ ಪಕ್ಷದ ಚುನಾವಣಾ ಬಜೆಟನ್ನು ನೀಡಿದೆ.
ಜನತೆಯ ಹಿತದೃಷ್ಟಿಯಿಂದ ಇದು ನಿರಾಸದಾಯಕ ಬಜೆಟ್ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments