Wednesday, June 17, 2026
Google search engine
Homeಕಾರ್ಕಳಕಾರ್ಕಳ: ಗಂಡ-ಹೆಂಡತಿ ನಡುವಿನ ಜಗಳ; ಹೆಂಡತಿಗೆ ಗಂಡನಿಂದ ಮಾರಣಾಂತಿಕ ಹಲ್ಲೆ

ಕಾರ್ಕಳ: ಗಂಡ-ಹೆಂಡತಿ ನಡುವಿನ ಜಗಳ; ಹೆಂಡತಿಗೆ ಗಂಡನಿಂದ ಮಾರಣಾಂತಿಕ ಹಲ್ಲೆ

ವ್ಯಕ್ತಿಯೋರ್ವನು ಮದ್ಯಪಾನ ಮಾಡಿ ತನ್ನ ಹೆಂಡತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜೂ. 15 ರಂದು ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

ಆರೋಪಿ ಧರ್ಮ ಎಂಬಾತನು ದಿನನಿತ್ಯ ಕುಡಿದು ಬಂದು ತನ್ನ ಹೆಂಡತಿ ಬೇಬಿ ಎಂಬವರ ಜೊತೆ ಜಗಳವಾಡುತ್ತಿದ್ದು, ಜೂ.15 ರಂದು ಎಂದಿನಂತೆ ಕುಡಿದು ಬಂದು ಪತ್ನಿಯನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಯನ್ನು ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಬೇಬಿ ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ದಂಪತಿಯ ಪುತ್ರಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments