ಸ್ವಾತಂತ್ರ ಹೋರಾಟಗಾರ ವಿ.ಡಿ.ಸಾವರ್ಕರ್ ತಮ್ಮ ಶಿಕ್ಷೆಯಅವಧಿಯನ್ನು ಕಡಿತಗೊಳಿಸುವಂತೆ ಕೋರಿ ಬ್ರಿಟಿಷ್ ಸರಕಾರಕ್ಕೆ 10 ಕ್ಷಮಾಪಣ ಅರ್ಜಿಗಳನ್ನು ಸಲ್ಲಿಸಿದ್ದರು ಎಂಬುದನ್ನು ಅವರ ಮರಿಮೊಮ್ಮಗ ಪುಣೆ ಕೋರ್ಟ್ ಮುಂದೆ ಸೋಮವಾರ ಒಪ್ಪಿಕೊಂಡಿದ್ದಾರೆ. ಆದರೆ, ಆ ಅರ್ಜಿಗಳಲ್ಲಿ ಬ್ರಿಟಿಷರಿಗೆ ನಿಷ್ಠೆವ್ಯಕ್ತಪಡಿಸುವ ಯಾವುದೇ ಪದಗಳಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೈದಿಗಳು ಇಂತಹ ಅರ್ಜಿಗಳನ್ನು ಸಲ್ಲಿಸಬೇಕೆಂಬ ಯಾವುದೇ ಕಡ್ಡಾಯ ನಿಯಮವಿರಲಿಲ್ಲ ಎಂದು ಮರಿಮೊಮ್ಮಗ ಸತ್ಯಕಿ ಸಾವರ್ಕರ್ ತಿಳಿಸಿದ್ದಾರೆ.ಕ್ರಿಮಿನಲ್ ನಿಂದನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಪರ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಹಾಜರಾಗಿದ್ದ ವಕೀಲರು ನಡೆಸಿದ ಸವಾಲಿನವೇಳೆ ವಿಷಯವನ್ನು ಸತ್ಯಕಿ ಅವರು ಒಪ್ಪಿಕೊಂಡಿದ್ದಾರೆ.



















