ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ತಾಯಿ- ಮಗ
2025 ರ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಸಾಂತೂರ್ ನಿವಾಸಿ ಶ್ರೀಮತಿ ರೋಸ್ಲಿನ್ ಜೇಸಿಂತ ಡಿಸೋಜಾ ಹಾಗೂ ಅವರ ಪುತ್ರ ಜೇಷ್ಠನ್ ಡಿಸೋಜಾ ಇವರು ಜೊತೆಯಾಗಿ ಪರೀಕ್ಷೆ ಬರೆದು ವಿಶಿಷ್ಟವಾಗಿ ಪಾಸಾಗಿರುತ್ತಾರೆ.
ಶ್ರೀಮತಿ ರೋಸ್ಲಿನ್ ಜೇಸಿಂತ ಇವರು ಕಾಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರ್ಟ್ಸ್ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿ ಯಾಗಿ ನೋಂದಾವಣೆಗೊಂಡು ಮೈ – ಟೆಕ್ ಟ್ಯೂಟೋ ರಿಯಲ್ ಕಾಲೇಜು ಶಿರ್ವ ಇಲ್ಲಿ ಟ್ಯೂಷನ್ ಪಡೆದು 600 ಅಂಕಗಳಲ್ಲಿ 517 ಅಂಕ ಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.ಇವರ ಪುತ್ರ ಜೇಷ್ಠನ್ ಡಿಸೋಜಾ ಇವರು ನಿಟ್ಟೆ ಕಾಲೇಜು ನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿ ತಾಯಿ ಮಗ ವಿಶಿಷ್ಟ ಸಾಧನೆ ಮಾಡಿರುತ್ತಾರೆ.
ಶ್ರೀಮತಿ ಜೇಸಿಂತ ಡಿಸೋಜಾ ಇವರು ಎಸ್. ಎಸ್. ಎಲ್. ಸಿ ಪರೀಕ್ಷೆ ಬರೆದು ಬರೋಬ್ಬರಿ 25 ವರ್ಷಗಳ ನಂತರ ಪಿ ಯು ಸಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ 100 ಅಂಕ ಗಳಲ್ಲಿ 99 ಅಂಕಗಳನ್ನು ಪಡೆದು ವಿಶಿಷ್ಟ ದಾಖಲಯೊಂದಿಗೆ ಪಾಸಾಗಿರುತ್ತಾರೆ.
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜೇಸಿಂತ ಡಿಸೋಜಾ ಇವರು ಪದೋನ್ನತಿ ಗಾಗಿ ಪರೀಕ್ಷೆ ಬರೆಯಬೇಕಾದ ಸಂದರ್ಭ ಒದಗಿ ಬಂದಿದ್ದು ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಾದಿಸುವ ಛಲವೊಂದಿದ್ದರೆ ಯಶಸ್ಸನ್ನು ಪಡೆಯಬಹುದು ಮೈಟೆಕ್ ಸಂಸ್ಥೆಯ ಉದಯ ಆಚಾರ್ಯ ಮೆಚ್ಚುಗೆ ಸೂಚಿಸಿದ್ದಾರೆ.ಇವರ ಈ ಅಮೋಘ ಸಾಧನೆ ತುಂಬಾ ಸಂತೋಷ ತಂದಿದೆ ಎಂದು ಕನ್ನಡ ವಿಭಾಗದ ಶಿಕ್ಷಕಿ ರೇಷ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.