
ಕೆಸಿಇಟಿಯಲ್ಲಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಅನಂತ್ ಎನ್.ಕೆ. ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 57 ನೇ ರ‍್ಯಾಂಕ್
ಸಂಸ್ಥೆಗೆ ಐದು ನೂರರ ಒಳಗಡೆ ಎರಡು ರ‍್ಯಾಂಕ್
ಕಾರ್ಕಳ: ಈ ಬಾರಿಯ ಕೆಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಅನಂತ್ ಎನ್ ಕೆ ಇಂಜಿನಿಯರಿAಗ್‌ನಲ್ಲಿ ರಾಜ್ಯಕ್ಕೆ 57 ನೇ ರ‍್ಯಾಂಕ್ ಹಾಗೂ ಬಿ-ಫಾರ್ಮಾದಲ್ಲಿ 333ನೇ ರ‍್ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅಮೋಘ ಸಾಧನೆಯನ್ನು ದಾಖಲಿಸಿದೆ.
ಇದರ ಜೊತೆಗೆ ಸಂಹಿತ್ ಎಸ್ ಆಚಾರ್ಯ ಅಗ್ರಿಕಲ್ಚರ್‌ನಲ್ಲಿ 826ನೇ ರ‍್ಯಾಂಕ್ ಹಾಗೂ ಬಿಎನ್‌ವೈಎಸ್‌ನಲ್ಲಿ 1888ನೇ ರ‍್ಯಾಂಕ್, ಇಂಜಿನಿಯರಿ0ಗ್‌ನಲ್ಲಿ 2527 ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಶ್ರೀಯಾ ಅಗ್ರಿಕಲ್ಚರ್‌ನಲ್ಲಿ 1591ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.
ಸಂಸ್ಥೆಯು ಈ ಸಾಲಿನಲ್ಲಿ ಅಗ್ರ ನೂರರ ಒಳಗೆ ಒಂದು, ಐದು ನೂರರ ಒಳಗೆ ಎರಡು, ಸಾವಿರದ ಒಳಗೆ ಮೂರು, ಐದು ಸಾವಿರದ ಒಳಗೆ 15, ಹತ್ತು ಸಾವಿರದ ಒಳಗೆ 29 ರ‍್ಯಾಂಕ್ ಹಾಗೂ ಹದಿನೈದು ಸಾವಿರದ ಒಳಗೆ 40 ರ‍್ಯಾಂಕ್‌ಗಳನ್ನು ಪಡೆದುಕೊಂಡಿದೆ. ಗ್ರಾಮೀಣ ಹಾಗೂ ಬಡ ಸಮುದಾಯದ ವಿದ್ಯಾರ್ಥಿಗಳ ಆಶಾಕಿರಣವಾಗಿ, ದಾಖಲಾತಿಗೆ ಯಾವುದೇ ಅಂಕಗಳ ಮಿತಿಯಿಲ್ಲದೆ ದಾಖಲಾತಿ ನೀಡಿ ಸಿಇಟಿ ತರಬೇತಿ ಪಡೆದ 124 ವಿದ್ಯಾರ್ಥಿಗಳಲ್ಲಿ ಹದಿನೈದು ಸಾವಿರದ ಒಳಗೆ 40 (39%) ರ‍್ಯಾಂಕುಗಳನ್ನು ಗಳಿಸುವ ಮೂಲಕ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.












