ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ರಾಜಕೀಯ ನಡೆಯಬೇಕು ವಿನಹ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ನಡೆಯಕೂಡದು. ನಾವೆಲ್ಲರು ಭಾರತೀಯರು, ನಾವೆಲ್ಲರು ಒಂದು. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ರಾಜಕೀಯ ವೈರತ್ವ ಇರಬಾರದು. ನಮ್ಮೆಲ್ಲರ ಜವಾಬ್ದಾರಿ, ನಮ್ಮ ಕ್ಷೇತ್ರ, ನಮ್ಮ ಜಿಲ್ಲೆ ಮತ್ತು ನಮ್ಮ ರಾಜ್ಯ ಹಾಗು ನಮ್ಮ ದೇಶದ ಅಭಿವೃದ್ಧಿಯಾಗಬೇಕು. ಅದಕ್ಕೆ ನಾವೆಲ್ಲರು ಒಟ್ಟಾಗಿ ಕೈ ಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ದಿನಕರ್ ಶೆಟ್ಟಿ ನಿಟ್ಟೆ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶ ಇದೆ.ಆದರೆ ಪ್ರತಿಭಟನೆ ಮಾಡುವ ಭರದಲ್ಲಿ ನಮ್ಮ ಮಾತಿನ ಮೇಲೆ ನಿಗಾ ಇರಬೇಕು. ಮಾತು ಆಡಿದರೆ ಹೋಯಿತು ಹಾಗು ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯಂತೆ, ಒಂದು ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ತಮ್ಮ ಪಕ್ಷ ಹಾಗು ಪಕ್ಷದ ನಾಯಕನನ್ನು ಸಮರ್ಥನೆ ಮಾಡುವುದು ಆವರ ಆದ್ಯ ಕರ್ತವ್ಯ. ತಮ್ಮ ಪಕ್ಷ ಹಾಗು ಪಕ್ಷದ ನಾಯಕರನ್ನು ಸಂತೋಷ ಪಡಿಸುದೋಸ್ಕರ ಪ್ರತಿ ಪಕ್ಷದ ನಾಯಕರನ್ನು ಹಗುರವಾಗಿ ಮಾತನಾಡುವುದು ಸಮಂಜಸವಲ್ಲ.
ಅವರ ಉಡುಗೆ ತೊಡುಗೆಯ ಬಗ್ಗೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಅವರ ಇಷ್ಟವಾದ ಉಡುಗೆ ತೊಡುಗೆ ಹಾಕಿಕೊಳ್ಳಲಿಕ್ಕೆ ಅವರಿಗೆ ಸ್ವಾತಂತ್ರ್ಯ ಇದೆ. ಆಯಾಯ ಪ್ರದೇಶಕ್ಕೆ, ಆಯಾಯ ಸಭೆ ಹಾಗು ಸಮಾರಂಭಗೋಸ್ಕರ ಅವರಿಗೆ ಇಷ್ಟವಾದ ಉಡುಗೆಯನ್ನು ಧರಿಸುತ್ತಾರೆ.ಮಾನ್ಯ ಉದಯ ಕುಮಾರ್ ಶೆಟ್ಟಿ ಮುನಿಯಾಲುರವರು ಯಾರು, ಏನು ಎಂದು ಕಾರ್ಕಳ ಹಾಗು ಆಸುಪಾಸಿನ ತಾಲೂಕು ಮತ್ತು ಜಿಲ್ಲೆಯ ಜನತೆಗೆ ಗೊತ್ತಿದೆ. ಅವರ ವ್ಯಕ್ತಿತ್ವ ಮತ್ತು ಸಮಾಜ ಸೇವೆ. ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ, ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗು ಸಾಮಾಜಿಕ ಸೇವೆಯನ್ನು ಮಾಡುತ್ತ ಬಂದಿದ್ದಾರೆ, ಈಗಲೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಯಾರೇ ಆಗಲಿ ರಾಜಕೀಯ ದ್ವೇಷ ಮಾಡಬಾರದು. ನಾವೆಲ್ಲರು ಭಾರತೀಯರು ಸೇರಿ, ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಕ್ಷೇತ್ರದ ಅಭಿವೃದ್ದಿ ದೃಷ್ಟಿ ಯಿಂದ ಒಟ್ಟುಗೂಡಿ ಕೆಲಸ ಮಾಡಬೇಕು ಹಾಗು ಜಿಲ್ಲೆಯಲ್ಲಿ ಜಾತಿ ಹಾಗು ಧರ್ಮ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರೋಣ ಎಂದು ಅವರು ತಿಳಿಸಿದ್ದಾರೆ.