ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ತಾಯಿ
ಪಮ್ಮಿ ಸೇರಿಗಾರ್ ವಿಧಿವಶ.
ಹೆಬ್ರಿ:ಹೆಬ್ರಿ ಪೇಟೆಯ ನಿವಾಸಿ ಪಮ್ಮಿ ಸೇರಿಗಾರ್ (69) ಎಂಬವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ನಿಧನರಾದರು. ಅಂದಿನ ಕಾಲದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿಯವರಿಗೆ ನಿಕಟವರ್ತಿಯಾಗಿದ್ದರು.
ಹೆಬ್ರಿಗೆ ಬಂದಾಗ ವೀರಪ್ಪ ಮೊಯಿಲಿ ಅವರು ಪಮ್ಮಿ ಸೇರಿಗಾರ್ ಅವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಮೃತರಿಗೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಚೈತನ್ಯ ಯುವ ವೃಂದದ ಗೌರವಾಧ್ಯಕ್ಷ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ 49ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಏಕೈಕ ಪುತ್ರ ಎಚ್.ಜನಾರ್ಧನ್ ಹಾಗೂ ಕವಿಯಾಗಿರುವ ಅರುಣಾ ಹೆಬ್ರಿ ಸೇರಿದಂತೆ ಮೂವರು ಪುತ್ರಿಯರು ಇದ್ದಾರೆ. ಹೆಬ್ರಿಯ ಪರಿಸರದಲ್ಲಿ ಪಮ್ಮಿ ಸೇರಿಗಾರ್ ಜನಾನುರಾಗಿಯಾಗಿದ್ದರು.