ಪ್ರತಿಭಟನೆಯ ನೆಪದಲ್ಲಿ ಕಾಂಗ್ರೇಸ್ ನಾಯಕರಿಗೆ ಅವಮಾನ, ಅದೇ ಮಾದರಿಯಲ್ಲಿ ಶಾಸಕರಿಗೆ ಸನ್ಮಾನದ ಉತ್ತರ
ಕೆಟ್ಟ ಸಂಪ್ರದಾಯವನ್ನು ಪ್ರಾರಂಬಿಸಿದ್ದೀರಿ ಆದರೆ ಅಂತ್ಯ ನಾವು ಹಾಡುತ್ತೇವೆ
ಕಾಮಗಾರಿ ಕಳಪೆಯಾಗಿದ್ದರೆ ಕ್ರಮಕ್ಕೆ ಅವಕಾಶವಿದೆ ಆದರೆ ನಕಲಿ ಪ್ರತಿಮೆ ನಿರ್ಮಾಣಕ್ಕೆ ಯಾವ ಶಿಕ್ಷೆ
ಶುಭದರಾವ್
ಹನ್ನೆರಡು ವರ್ಷದ ಹಿಂದೆ ನಿರ್ಮಾಣವಾದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಉದಯ್ ಶೆಟ್ಟಿ ವಿರುದ್ದ ಕಾಡು ಹೊಳೆ-ಅಂಡಾರು ರಸ್ತೆಯಲ್ಲಿ ನಡೆದ ಬಿಜೆಪಿ ಪ್ರಾಯೋಜಿತ ಪ್ರತಿಭಟನೆ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ, ಅವರು ಪ್ರಾರಂಬಿಸಿದ ಈ ರೀತಿಯ ಅವಹೇಳನಕಾರಿ ಪ್ರತಿಭಟನೆ ಅವರಿಗೆ ತಿರುಗು ಬಾಣವಾಗಲಿದ್ದು ಅದಕ್ಕೆ ನಾವು ಅಂತ್ಯ ಹಾಡಲಿದ್ದೇವೆ, ಶಾಸಕ ಸುನೀಲ್ ಕುಮಾರ್ ಅವಧಿಯಲ್ಲಿ ನಡೆದ ಕಾಮಾಗಾರಿಗಳಲ್ಲಿ ಎಲ್ಲಿ ಲೋಪವಾಗಿದೆಯೋ ಆ ಎಲ್ಲಾ ಕಡೆಗಳಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2013 ರಲ್ಲಿ ಸುನೀಲ್ ಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಹಂತ 2 ರ ಯೋಜನೆಯ ಅಡಿಯಲ್ಲಿ ಕಾಡುಹೊಳೆ- ಅಂಡಾರು 2.900 ಕಿಮೀ ರಸ್ತೆಗೆ 1ಕೋಟಿ 80 ಲಕ್ಷ ಬಿಡುಗಡೆಯಾಗಿ ಕಾಮಗಾರಿ ನಡೆದಿತ್ತು, ಆ ರಸ್ತೆ ನಿರ್ವಹಣೆಯ ಅವಧಿ ಕೇವಲ 5 ವರ್ಷಗಳ ಆಗಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿನವರೆಗೂ ನಿರ್ವಹಣೆಯನ್ನು ಉದಯ್ ಶೆಟ್ಟಿಯವರೇ ಮಾಡಿಕೊಂಡು ಬರುತ್ತಿದ್ದಾರೆ ಒಂದು ವೇಳೆ ಕಾಮಗಾರಿ ಕಳಪೆಯಾಗಿದ್ದರೆ ಶಾಸಕರಿಗೆ ಬಿಲ್ಲು ಪಾವತಿಯನ್ನು ತಡೆದು ತನಿಖೆಗೆ ಒಪ್ಪಿಸುವ ಅಧಿಕಾರವಿತ್ತು ಆದರೆ ಅವರು ಹಾಗೆ ಮಾಡದೆ ಬಿಲ್ಲು ಪಾವತಿಸಿದ್ದು ಯಾಕೆ ? ಕಮಿಷನ್ ಪಡೆಯಲೆಂದೇ ಎಂದು ಪ್ರಶ್ನಿಸಿದ್ದಾರೆ?
ಸುನೀಲ್ ಕುಮಾರ್ ಅವಧಿಯಲ್ಲಿ ನಡೆದ ಕಾಮಗಾರಿಗಳು ಕಳಪೆಯಾಗಿರುವ ಅನೇಕ ಉದಾಹರಣೆಗಳಿವೆ ಅದರಲ್ಲಿ ನಗರದ ಒಳಚರಂಡಿ ಪ್ರಮುಖವಾದ್ದು 16 ಕೋಟಿಯ ಒಳಚರಂಡಿ ಕಾಮಗಾರಿ ಕಳಪೆ ಎಂದು ಮೊದಲ ವರ್ಷವೇ ಸಾಬೀತಾಗಿದೆ ಅಂದಿನಿಂದ ಇಂದಿನವರೆಗೂ ಒಳಚರಂಡಿಯ ನೀರು ರಥಬೀದಿಯಲ್ಲಿ ಹರಿಯುತಿದೆ, ನಗರದ ಅನೇಕ ಮನೆಗಳ ಬಾವಿಯ ನೀರು ಕಲುಷಿತವಾಗಿ ಕುಡಿಯಲು ಸಾದ್ಯವಾಗದೆ ಗೃಹ ಬಳಕೆಗೂ ಅನುಪಯುಕ್ತವಾಗಿದೆ ಅದರೆ ಶಾಸಕರು ಈ ವರೆಗೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಿಲ್ಲ.
ಕಾಮಗಾರಿಗಳು ಕಳಪೆಯಾದರೆ ಮರು ನಿರ್ಮಾಣಕ್ಕೆ ಅಥವಾ ಕಾನೂನು ಕ್ರಮಕ್ಕೆ ಅವಕಾಶವಿದೆ ಆದರೆ ಪರಶುರಾಮನ ಕಂಚಿನ ಪ್ರತಿಮೆಯ ಹೆಸರಿನಲ್ಲಿ ನಕಲಿ ಪ್ರತಿಮೆ ನಿರ್ಮಿಸಿ ಜನತೆಗೆ ಬಗೆದ ದ್ರೋಹಕ್ಕೆ ಯಾವ ಶಿಕ್ಷೆ ನೀಡಬೇಕು ಎಂದು ಜನ ನಿರ್ಧರಿಸಬೇಕು, ಈ ವಿಚಾರವಾಗಿ ಸತ್ಯ ಹೊರಬಂದ ನಂತರ ಉದಯ ಶೆಟ್ಟಿಯವರನ್ನು ಗುರಿಯಾಗಿಸಿ ಅವಮಾನಿಸುವ ಪ್ರಯತ್ನ ನಿರಂತರ ನಡೆಯುತಿದೆ ಇದರಿಂದ ನಾವು ದೃತಿಗೆಡುವುದಿಲ್ಲ, ಶಾಸಕರ ಸನ್ಮಾನದ ವಿವರ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ