Thursday, September 19, 2024
Google search engine
Homeಕಾರ್ಕಳಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು ಹೋರಾಟಕ್ಕೆ...

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

ಡಾ. ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹೋರಾಟಕ್ಕೆ ಸಿಕ್ಕಿತು ಯಶಸ್ಸು

ಹೋರಾಟಕ್ಕೆ ಬೆಚ್ಚಿ ಹಣ ನೀಡುವುದಾಗಿ ಕಂಪನಿ ಹೇಳಿಕೆ

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ಯ ಕಾಮಗಾರಿಯ ಗುತ್ತಿಗೆದಾರರು ಸ್ಥಳೀಯ ಹಲವಾರು ಮಂದಿಗೆ ಮಾಡಿದ ವಂಚನೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಡಾ ರವೀಂದ್ರ ಶೆಟ್ಟಿಯವರ ನೇತೃತ್ವದ ಪಟ್ಟು ಬಿಡದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರೂ 385 ಕೋಟಿ ವೆಚ್ಚದಲ್ಲಿ 35 ಕಿ ಮಿ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಮಾಡಲಾಗಿತ್ತು.ಈ ಟೆಂಡರ್ ನ್ನು ಮಹಾರಾಷ್ಟ್ರದ ನಾಗ್ಪುರದ ಡಿ ಪಿ ಜೈನ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಈ ಕಂಪನಿಯು ಈ ರಸ್ತೆಯ ಅಭಿವೃದ್ಧಿ ಕಾರ್ಯವನ್ನು 2023ನೇ ಸಾಲಿನಿಂದ ಆರಂಭ ಮಾಡಿತ್ತು. ಈ ಸಂದರ್ಭದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ಗಳಿಂದ ಡೀಸೆಲ್, ಪೆಟ್ರೋಲ್, ಕ್ರಷರ್ ಗಳಿಂದ ಜಲ್ಲಿ, ಜೀನಸು ಅಂಗಡಿಗಳಿಂದ ಆಹಾರ ಸಾಮಗ್ರಿ, ಸ್ಟೇಷನರಿ ಸಾಮಗ್ರಿ, ಪೀಟೋಪಕರಣ ಹೀಗೇ ಹಲವಾರು ಸಾಮಗ್ರಿಗಳನ್ನು ಈ ಕಂಪನಿ ಸಾಲದ ರೂಪದಲ್ಲಿ ಪಡೆದಿತ್ತು.ಇದೊಂದು ದೊಡ್ಡ ಕಂಪನಿ ಎಂದು ಭಾವಿಸಿ ಎಲ್ಲರೂ ಸಾಮಗ್ರಿಗಳನ್ನು ನೀಡಿದ್ದರು.

ವಂಚನೆಯ ಸುಳಿವು
ತಾವು ನೀಡಿದ ಸಾಮಗ್ರಿಗಳ ಬಿಲ್ಲು ಈ ತಿಂಗಳಿಗೆ ಪಾವತಿ ಆಗುತ್ತೆ, ಮುಂದಿನ ತಿಂಗಳು ಪಾವತಿ ಆಗುತ್ತೆ ಎಂದು ಕಾದು ಕೂತವರಿಗೆ ಹಣ ಸಿಗಲೇ ಇಲ್ಲ. ಈ ಕಂಪನಿಯ ಯಾರಲ್ಲಿ ಕೇಳಿದರು ಕೂಡ ಹಣ ಮಾತ್ರ ಬರಲೇ ಇಲ್ಲ. ಕೆಲವರು ನಾಗ್ಪುರದಲ್ಲಿರುವ ಡಿ ಪಿ ಜೈನ್ ಕಂಪನಿ ಗೆ ತೆರಳಿ ತಮ್ಮ ಹಣ ನೀಡುವಂತೆ ಕೇಳಿದರೂ ಅವರನ್ನು ತೆಪ್ಪಗೆ ಹಿಂದಕ್ಕೆ ಕಳುಹಿಸಲಾಗಿತ್ತು. ಇದರಿಂದ ಜನ ಹೈರಾಣ ಆಗಿ ಹೋಗಿದ್ದರು. ತಮ್ಮ ಸಮಸ್ಯೆ ಪರಿಹಾರ ಮಾಡೋದು ಹೇಗೆ ಎಂದೇ ಯಾರಿಗೂ ತಿಳಿಯಲಿಲ್ಲ.

ಡಾ. ರವೀಂದ್ರ ಶೆಟ್ಟಿ ಎಂಟ್ರಿ
ಈ ವಂಚನೆಯ ಮಾಹಿತಿಯನ್ನು ಕ್ರಷರ್ ಮಾಲಕರೋರ್ವರು ರಾಜ್ಯ ಕ್ರಷರ್ ಮಾಲಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಯವರಲ್ಲಿ ತಿಳಿಸಿ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಮನವಿ ಮಾಡಿದರು.

45 ಜನರ ತಂಡ ನಾಗ್ಪುರಕ್ಕೆ
ಈ ಬಗ್ಗೆ ಹೋರಾಟದ ಅವಶ್ಯಕತೆ ಮನಗಂಡ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಸುಮಾರು 45 ಜನರ ತಂಡವನ್ನು ನಾಗ್ಪುರಕ್ಕೆ ಕೊಂಡೊಯ್ಡರು.

ನೆಲದಲ್ಲಿ ಕುಳಿತು ಪ್ರತಿಭಟನೆ
ನಾಗ್ಪುರಕ್ಕೆ ತೆರಳಿದ ಈ ತಂಡವು ಡಿ ಪಿ ಜೈನ್ ಕಂಪನಿಗೆ ಹೋಗಿ ವಂಚನೆ ಮಾಡಿದ ಹಣ ನೀಡುವಂತೆ ಮನವಿ ಮಾಡಿತು.ಆದರೆ ಅಲ್ಲಿ ಕೂಡ ಕಂಪನಿ ಸಿಬ್ಬಂದಿಗಳು ಮಾತ್ರ ಇದ್ದು ಹಣ ನೀಡುವ ನಿಟ್ಟಿನಲ್ಲಿ ಯಾವುದೇ ಮಾತುಕತೆ ಮಾಡಲಿಲ್ಲ. ಇದರಿಂದ ಕೆರಳಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಹಾಗೂ ತಂಡವು ಕಚೇರಿಯೊಳಗೆ ನೆಲದಲ್ಲಿ ಕುಳಿತು ಧರಣಿ ಆರಂಭ ಮಾಡಿತು.

ಬೆಳಗ್ಗೆ ಆರಂಭ ಆದ ಧರಣಿ ನಿರತರ ಮನ ಒಲಿಸಲು ಕಂಪನಿ ಪ್ರಯತ್ನ ಪಟ್ಟರು ಕೂಡ ಎಲ್ಲರ ಹಣ ಸಿಗೋವರೆಗೂ ತಾವು ಕದಲೋದಿಲ್ಲ ಎಂದು ಡಾ. ರವೀಂದ್ರ ಶೆಟ್ಟಿ ಪಟ್ಟು ಬಿಡಲೇ ಇಲ್ಲ.

ಸುಮಾರು ಮದ್ಯಾಹ್ನ ಹೊತ್ತಿಗೆ ಈ ಕಂಪನಿಯ ಮುಖ್ಯಸ್ಥರು ಡಾ ರವೀಂದ್ರ ಶೆಟ್ಟಿಯವರ ಬಳಿ ಬಂದು ಮಾತುಕತೆ ಮಾಡುವಂತೆ ತಿಳಿಸಿದರು. ಆದ್ರೆ ವಂಚನೆಗೆ ಒಳಗಾದವರಿಗೆ ಹಣ ಕೊಡದಿದ್ದರೆ ಎಷ್ಟು ದಿನ ಆದರೂ ತಾವು ಇಲ್ಲಿಂದ ಕದಲೋದಿಲ್ಲ ಎಂದು ತಿಳಿಸಲಾಯಿತು.

ಬಿಜೆಪಿ ಶಾಸಕ ಮೋಹನ್ ಮತೆ ಸ್ಥಳಕ್ಕೆ
ಈ. ವಿಚಾರದ ಮಾಹಿತಿ ತಿಳಿದ ನಾಗ್ಪುರದ ಶಾಸಕರಾದ ಮೋಹನ್ ಮತೆ ಸ್ಥಳಕ್ಕೆ ಆಗಮಿಸಿ ಡಾ. ರವೀಂದ್ರ ಶೆಟ್ಟಿಯವರ ಮನ ಒಳಿಸುವ ಪ್ರಯತ್ನ ಮಾಡಿದರು.ಬಳಿಕ ಅಲ್ಲಿಂದ ಶಾಸಕರು ಕರ್ನಾಟಕದ ಬಿಜೆಪಿ ಜನ ಪ್ರತಿನಿಧಿಗಳನ್ನು ಹಾಗೂ ನಾಗ್ಪುರದಲ್ಲಿರುವ ಸುರತ್ಕಲ್ ನ ನವೀನ್ ಶೆಟ್ಟಿಯವರ ಮುಖಾಂತರ ಹೋರಾಟಗಾರರ ಮನ ಒಲಿಸುವ ಪ್ರಯತ್ನ ಮಾಡಲಾಯಿತು

ಬಳಿಕ ಶಾಸಕ ಮೋಹನ್ ಮತೆಯವರು ಡಿ ಪಿ ಜೈನ್ ಕಂಪನಿಯ ಜೊತೆಗೆ ಡಾ. ರವೀಂದ್ರ ಶೆಟ್ಟಿಯವರ ಮೂಲಕ ಮಾತುಕತೆ ಮಾಡಿಸಿದರು. ವಂಚನೆ ಆದವರಿಗೆ ಹಣ ನೀಡಿದ್ರೆ ಮಾತ್ರ ತಾವೆಲ್ಲರೂ ಇಲ್ಲಿಂದ ತೆರಳುವುದಾಗಿ ತಿಳಿಸಲಾಯಿತು.

ಕೊನೆಗೆ ಡಿ ಪಿ ಜೈನ್ ಕಂಪನಿಯು ಹಣ ನೀಡುವುದಾಗಿ ಒಪ್ಪಿ ಕೊಂಡಿದೆ.ಡಾ ರವೀಂದ್ರ ಶೆಟ್ಟಿಯವರ ಪಟ್ಟು ಬಿಡದ ಹೋರಾಟದ ಜೊತೆಗೆ ಹಲವಾರು ಮಂದಿ ಜೊತೆಗೂಡಿ ಈ ಹೋರಾಟಕ್ಕೆ ಯಶಸ್ಸು ದೊರಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments