
ಭಾರತೀಯ ಜೈನ್ ಮಿಲನ್ ವಲಯ 8 ರ ಮಂಗಳೂರು ವಿಭಾಗದ ಜಿನಭಜನೆ ಸ್ಪರ್ಧೆಗಳ ಸೀಸನ್ 9 , ಬಜಗೋಳಿಯ ಸುಮ್ಮಗುತ್ತು ಬಂಡಸಾಲೆ ಧರ್ಮಶಾಲೆ ತೀರ್ಥದಲ್ಲಿ ಯಶಸ್ವಿಯಾಗಿ ನಡೆಯಿತು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ವೀರ್ ಸುರೇಂದ್ರ ಕುಮಾರ್ ಜ್ಯೋತಿ ಬೆಳಗಿಸಿ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಮೂಡುಬಿದಿರೆ ಜೈನ್ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನಗೈದರು.ವೀರಾಂಗನ ಅನಿತಾ ಸುರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್, ಪದ್ಮಪ್ರಸಾದ್ ಹೆಗ್ಡೆ, ಸುಮಂತ್ ಕುಮಾರ್ ಜೈನ್,ಸೋನಿಯಾ ವರ್ಮಾ,ಜಯವರ್ಮ ಹೆಗ್ಡೆ, ವಜ್ರನಾಭ ಚೌಟ, ಧರ್ಮರಾಜ ಜೈನ್ ಅತಿಥಿಗಳಾಗಿ ಭಾಗವಹಿಸಿದರು.
ಕಿರಿಯರ ವಿಭಾಗದ 35 ಹಾಗೂ ಹಿರಿಯರ ವಿಭಾಗದ 58 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಮೂಡುಬಿದಿರೆ ಚಾರುಕೀರ್ತಿ ಮಹಾಸ್ವಾಮಿಗಳು ಆಶೀರ್ವಚನಗೈದರು.
ಡಿ.ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್ ಸೋನಿಯವರ್ಮ, ಕೆ.ಯುವರಾಜ ಭಂಡಾರಿ, ಪುಷ್ಪರಾಜ್ ಜೈನ್, ಯುವರಾಜ್ ಜೈನ್,ಪ್ರವೀಣ್ ಕುಮಾರ್, ರತ್ನಾಕರ್ ಜೈನ್, ಮಯೂರಕೀರ್ತಿ, ರಕ್ಷಿತ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು, ಸುದರ್ಶನ್ ಜೈನ್ ಸಭೆಯ ಅಧ್ಯಕ್ಷರಾಗಿ ಭಾಗವಹಿಸಿದರು.
ವಿಭಾಗದ ನಿರ್ದೇಶಕರಾದ ಜಯರಾಜ ಕಂಬಳಿ, ಸೋಮಶೇಖರ್, ಪ್ರಮೋದ್ ಕುಮಾರ್, ಶ್ರೀವರ್ಮ ಆಜ್ರಿ, ಸುಕುಮಾರ್ ಬಲ್ಲಾಳ್ ,ರಾಜಶ್ರೀ ಹೆಗ್ಡೆ, ಯುವರಾಜ್ ಬಲಿಪ, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಜೊತೆ ಕಾರ್ಯದರ್ಶಿಗಳಾದ ಶ್ವೇತಾ ಜೈನ್, ಶಶಿಕಲಾ ಹೆಗ್ಡೆ, ಮಿಲನ್ ಅಧ್ಯಕ್ಷ ವರ್ಧಮಾನ ಜೈನ್, ಕಾರ್ಯದರ್ಶಿ ಓಂ ಪ್ರಕಾಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷ ಪ್ರಧಾನ ಜೈನ್, ಉಪಾಧ್ಯಕ್ಷ ವಿರಾಜ್ ಜೈನ್ ಕಾರ್ಯದರ್ಶಿ ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.
ಹಿರಿಯರ ವಿಭಾಗದಲ್ಲಿ ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿ ಪ್ರಥಮ ಬಹುಮಾನ, ಉಜಿರೆಯ ಶುಕ್ಲ ತಂಡ ದ್ವಿತೀಯ ಪ್ರಶಸ್ತಿ ಹಾಗೂ ಮೂಡುಬಿದಿರೆಯ ಸಂಪೂಜ್ಯ ತಂಡ ತೃತೀಯ ಪ್ರಶಸ್ತಿಗಳನ್ನು ಜಯಿಸಿದರೆ, ಸುವರ್ಣ ಪ್ರಶಸ್ತಿ ಬೆಳ್ತಂಗಡಿಯ ಕಾಣಿಯೂರು ವಿಜಯ ಧ್ವನಿ ಹಿರಿಯ ನಾಗರಿಕರ ತಂಡ ಗಳಿಸಿತು.
ಬಜಗೋಳಿಯ ಅನಂತಶ್ರೀ ತಂಡ, ಉಜಿರೆಯ ಶ್ರುತ ತಂಡ, ಮಂಗಳೂರಿನ ಗೊಮ್ಮಟೇಶ್ವರ ತಂಡ, ಮೂಡುಬಿದಿರೆಯ ಬ್ರಾಹ್ಮಿ ಮತ್ತು ರತ್ನತ್ರಯ ತಂಡಗಳು ರಾಜ್ಯ ಮಟ್ಟದ ಸ್ಪರ್ಧೆಗಳ ಅರ್ಹತಾ ಪ್ರಶಸ್ತಿ ಗಳಿಸಿದವು.
ಕಿರಿಯರ ವಿಭಾಗದಲ್ಲಿ ಬಂಟ್ವಾಳದ ವಿಟ್ಲ ಸಮ್ಯಕ್ತ್ವ ಪ್ರಥಮ, ಉಜಿರೆಯ ಶುಕ್ಲ ದ್ವಿತೀಯ ಹಾಗೂ ಮೂಡುಬಿದಿರೆಯ ಚಾರುಶ್ರೀ ತಂಡ ತೃತೀಯ ಪ್ರಶಸ್ತಿ ಗಳಿಸಿತು.ಉಜಿರೆಯ ಹರ್ಷದ, ವೇಣೂರಿನ ಜಿನ ಪ್ರವಕ್ತ ಮತ್ತು ಶ್ರೀ ಪ್ರವಕ್ತ ತಂಡಗಳು ಸೆಮಿಫೈನಲ್ ಗೆ ಅರ್ಹತಾ ಪ್ರಶಸ್ತಿ ಗಳಿಸಿದವು.




