ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಲಯನ್ಸ್ ಕ್ಲಬ್ ಬೆಳ್ಮಣ್ಣು, ಲಯನ್ಸ್ ಕ್ಲಬ್ ಬೆಳ್ಮಣ್ಣು ಸೆಂಚುರಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಅಬ್ಬನಡ್ಕ – ನಂದಳಿಕೆ, ಲಿಯೋ ಕ್ಲಬ್ ಬೆಳ್ಮಣ್ಣು, ರೋಟರಿ ಸಮುದಾಯದಳ, ಕೆಮ್ಮಣ್ಣು – ನಿಟ್ಟೆ, ಶ್ರೀ ಮಹಾಲಿಂಗೇಶ್ವರ ಯುವ ವೃಂದ, ಬೋಳ – ಪಿಲಿಯೂರು, ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಳಿಕೆ, ಯಕ್ಷಾಕ್ಷರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೋಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ , ಕಾಪು ತಾಲೂಕು, ಬೆಳ್ಮಣ್ಣು ವಲಯ, ಕೆದಿಂಜೆ ಒಕ್ಕೂಟ, ಇವರ ಸಂಯುಕ್ತ ಆಶ್ರಯದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಮಂಗಳೂರಿನ ತಜ್ಞ ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರಗಿತು.
ಆರೋಗ್ಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಮಹಿಳಾ ಆರೋಗ್ಯ ತಪಾಸಣೆ, ಕಿವಿ, ಮೂಗು, ಗಂಟಲು, ಮೂಳೆ ರೋಗ ತಪಾಸಣೆ, ಚರ್ಮರೋಗ ತಪಾಸಣೆ, ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ, ಇಸಿಜಿ ತಪಾಸಣೆ ಜರಗಿತು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ ಅಧ್ಯಕ್ಷತೆ ವಹಿಸಿದ್ದರು. ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಮಂಗಳೂರಿನ ತಜ್ಞ ವೈದ್ಯಾಧಿಕಾರಿಗಳಾದ ಡಾ. ಕಾರ್ತಿಕ್ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಆರೋಗ್ಯ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಎನ್.ಎಂ.ಹೆಗಡೆ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು, ಲಯನ್ಸ್ ಕ್ಲಬ್ ಬೆಳ್ಮಣ್ಣು ಸೆಂಚುರಿ ಅಧ್ಯಕ್ಷರಾದ ಸುನೀತಾ ಬಾಲಕೃಷ್ಣ ಶೆಟ್ಟಿ, ರೋಟರಿ ಸಮುದಾಯದಳ, ಕೆಮ್ಮಣ್ಣು – ನಿಟ್ಟೆ ಇದರ ಅಧ್ಯಕ್ಷರಾದ ಗಣೇಶ್ ಭಟ್, ಯಕ್ಷಾಕ್ಷರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೋಳ ಇದರ ಅಧ್ಯಕ್ಷರಾದ ಬೋಳ ಸುಧಾಕರ ಆಚಾರ್ಯ, ಗೌರವಾಧ್ಯಕ್ಷರು ಉದಯ ಶೆಟ್ಟಿ ಮೂಡುಮನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಿಂಜೆ ಒಕ್ಕೂಟದ ಸೇವಾ ನಿರತರಾದ ಆಶಾ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಬೆಳ್ಮಣ್ಣಿನ ಪೂರ್ವಾಧ್ಯಕ್ಷರಾದ ವಿಶ್ವನಾಥ್ ಪಾಟ್ಕರ್ ಸ್ವಾಗತಿಸಿದರು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಸದಸ್ಯರಾದ ಪದ್ಮಶ್ರೀ ಪೂಜಾರಿ, ವೀಣಾ ಆಚಾರ್ಯ ಪ್ರಾರ್ಥನೆಗೈದರು, ಪದ್ಮಶ್ರೀ ಪೂಜಾರಿ ವಂದಿಸಿದರು, ಹೆಬ್ರಿ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಉಪಾನ್ಯಾಸಕರಾದ ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.















