Wednesday, March 11, 2026
Google search engine
Homeಕಾರ್ಕಳಬಸ್ರೂರು ಶಾರದಾ ಕಾಲೇಜಿನ ಸಂಚಾಲಕರಾಗಿ ಅನುಪಮಾ ಶೆಟ್ಟಿ ಆಯ್ಕೆ

ಬಸ್ರೂರು ಶಾರದಾ ಕಾಲೇಜಿನ ಸಂಚಾಲಕರಾಗಿ ಅನುಪಮಾ ಶೆಟ್ಟಿ ಆಯ್ಕೆ

ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸೆಗಳಲ್ಲಿ ಒಂದಾದ ಬಸ್ರೂರು ಶಾರದಾ ಕಾಲೇಜಿನ ನೂತನ ಸಂಚಾಲಕರಾಗಿ ಅನುಪಮಾ.ಎಸ್.ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಫೆ.11ರಂದು ನಡೆದ ಶ್ರೀ ಶಾರದಾ ಕಾಲೇಜು ಟ್ರಸ್ಟ್ ಇದರ ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿಯ ಸಂಚಾಲಕರಾಗಿದ್ದ ಬಸ್ರೂರು ಅಪಣ್ಣ ಹೆಗ್ಡೆ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನೂತನ ಸಂಚಾಲಕರ ಆಯ್ಕೆ ನಡೆಸಲಾಗಿತ್ತು. ಆಡಳಿತ ಮಂಡಳಿಯ ನೂತನ ಸಂಚಾಲಕರಾಗಿ ಆಯ್ಕೆಯಾದ ಅನುಪಮಾ ಎಸ್.ಶೆಟ್ಟಿ ಅವರು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ ಕಾಲೇಜಿನ ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದಾರೆ.

ಅವರು ಬಾಂಡ್ಯಾ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕಿಯಾಗಿದ್ದು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ದತ್ತು ಸ್ವೀಕಾರ ಮಾಡಿರುವ ಬಾಂಡ್ಯಾ ಕೊಡ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments