ಕೆರ್ವಾಶೆ : ವಿಶೇಷ ಚೇತನರ ಸಮನ್ವಯ ಗ್ರಾಮಸಭೆ
ಕಾರ್ಕಳ: ಕೆರ್ವಾಶೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ ಮತ್ತು ವಿಕಲಚೇತನರ ವೈದ್ಯಕೀಯ ತಪಾಸಣೆ ಶಿಬಿರ ಬುಧವಾರ ಗ್ರಾಮ ಪಂಚಾಯತ್ ಕಛೇರಿ ಸಭಾಭವನದಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಿತಾ ಅಧ್ಯಕ್ಷತೆ ವಹಿಸಿದ್ದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಮಾ ಸ್ವಾಗತಿಸಿ ನಿರೂಪಿಸಿದರು ಮತ್ತು ವಿಕಲಚೇತನರ ಕಾಯ್ದಿರಿಸಿದ 5% ಅನುದಾನದ ಬಳಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡೆಲ್ ಆಫಿಸರ್ ಶ್ರೀಮತಿ ಜಯಶ್ರೀ ಅವರು ಭಾಗವಹಿಸಿದ್ದರು.
ಉಪಾಧ್ಯಕ್ಷ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರುಹಾಗೂ ಕಾರ್ಯದರ್ಶಿ ಸುಬ್ಬಯ್ಯ ಧನ್ಯವಾದ ಅರ್ಪಿಸಿದರು.
ಪಂಚಾಯಿತ್ ನ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿಆರ್.ಡಬ್ಲ್ಯೂ ಮನೋಹರ್ ಉಪಸ್ಥಿತರಿದ್ದರು
ಕಾರ್ಯಕ್ರಮದ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರೀಮತಿ ರೇಷ್ಮಾ ಇವರಿಂದ ಎಲ್ಲಾ ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು ಮತ್ತು ಕೆರ್ವಾಶೆ ಗ್ರಂಥಾಲಯದ ಸದಸ್ಯತ್ವ ಕಾರ್ಡ್ ನ್ನು ವಿತರಿಸಲಾಯಿತು.

















